Thursday, 1 March 2018

Gk (current affairs)

GK (current affairs)

🔷Q). ದೇಶದ ಶೇಕಡಾ ಎಷ್ಟು ಉನ್ನತ ಶಿಕ್ಷಣ ಸಂಸ್ಥೆಗಳು ಆನ್ ಲೈನ್ ಮೂಲಕ ತಾಂತ್ರಿಕೇತರ ಪದವಿ ಕೋರ್ಸ್ ಗಳ ಶಿಕ್ಷಣ ನೀಡಲು ಅನುಮತಿಯನ್ನು ಕೇಂದ್ರ ಸರ್ಕಾರ ನೀಡಲು ತೀರ್ಮಾನಿಸಿದೆ?

a) .ಶೇ 10
b) .ಶೇ 15
c) .ಶೇ 20
d) .ಶೇ 25
Answer) Description:
ಶೇ 15 # ದೇಶದ ಶೇ 15 ರಷ್ಟು ಉನ್ನತ ಶಿಕ್ಷಣ ಸಂಸ್ಥೆಗಳು ಆನ್ ಲೈನ್ ಮೂಲಕ ತಾಂತ್ರಿಕೇತರ ಪದವಿ ಕೋರ್ಸ್ ಗಳ ಶಿಕ್ಷಣ ನೀಡಲು ಅನುಮತಿಯನ್ನು ಕೇಂದ್ರ ಸರ್ಕಾರ ನೀಡಲು ತೀರ್ಮಾನಿಸಿದೆ. # ದೇಶದ ಉನ್ನತ ಶಿಕ್ಷಣದಲ್ಲಿ ಒಟ್ಟು ದಾಖಲಾತಿ ಸೂಚ್ಯಂಕವನ್ನು ಶೇ 25.2 ರಿಂದ 2020ನೇ ಇಸವಿ ರಷ್ಟರಲ್ಲಿ ಶೇ 30 ರ ವರೆಗೆ ಹೆಚ್ಚಿಸಲು ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ.

🔷Q). ಇತ್ತೀಚೆಗೆ ವಿವಾದಕ್ಕೆ ಗುರಿಯಾದ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ "ಪದ್ಮಾವತ್" ಚಿತ್ರವನ್ನು ಯಾವ ರಾಜ್ಯದಲ್ಲಿ ಪ್ರದರ್ಶಿಸಲು ಅಲ್ಲಿನ ಮುಖ್ಯಮಂತ್ರಿಯಾದ ಮನೋಹರ್ ಲಾಲ್ ಖಟ್ಟರ್ ಸರ್ಕಾರ ತಡೆ ನೀಡಿದೆ?

a) ಪಂಜಾಬ್
b) ಜಾರ್ಖಂಡ್
c) ಹರಿಯಾಣ
d) ಮೇಘಾಲಯ
Answer) Description:
ಹರಿಯಾಣ # 2018 ರ ಜನೇವರಿ 25 ರಂದು ತೆರೆಕಾಣಲಿರುವ ವಿವಾದಕ್ಕೆ ಗುರಿಯಾದ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ "ಪದ್ಮಾವತ್" ಚಿತ್ರವನ್ನು ಹರಿಯಾಣದಲ್ಲಿ ಪ್ರದರ್ಶಿಸಲು ಅಲ್ಲಿನ ಮುಖ್ಯಮಂತ್ರಿಯಾದ ಮನೋಹರ್ ಲಾಲ್ ಖಟ್ಟರ್ ಸರ್ಕಾರ ತಡೆ ನೀಡಿದೆ.

🔷Q). ಇತ್ತೀಚೆಗೆ ಯಾವ ರಾಷ್ಟ್ರವು ಒಬ್ಬಂಟಿತನ ಸಮಸ್ಯೆ ನಿವಾರಣೆಗೆ ಅಲ್ಲಿನ ಪ್ರಧಾನಿ ಅವರು ಪ್ರತ್ಯೇಕ ಸಚಿವರನ್ನು ನೇಮಿಸಿದ್ದಾರೆ?

a) ಜಪಾನ್
b) ಬ್ರಿಟನ್
c) ಜರ್ಮನಿ
d) ಶ್ರೀಲಂಕಾ
Answer) Description:
ಬ್ರಿಟನ್ # ಇತ್ತೀಚೆಗೆ ಒಬ್ಬಂಟಿತನ ಸಮಸ್ಯೆ ನಿವಾರಣೆಗೆ ಬ್ರಿಟನ್ ಪ್ರಧಾನಿ ತೆರೇಸಾ ಮೇ ಅವರು ಪ್ರತ್ಯೇಕ ಸಚಿವರನ್ನು ನೇಮಿಸಿದ್ದಾರೆ. # ಬಲಪಂಥೀಯ ಮಾನಸಿಕ ಅಸ್ವಸ್ಥನಿಂದ 2016 ರ ಜೂನ್ ನಲ್ಲಿ ಹತ್ಯೆಯಾಗಿದ್ದ ಲೇಬರ್ ಪಕ್ಷದ ಸಂಸದೆ ಜೊ ಕಾಕ್ಸ್ ಅವರ ಸ್ಮರಣಾರ್ಥ ದೇಶದಲ್ಲಿ ಮೊದಲ ಬಾರಿ ಇಂತಹ ಹುದ್ದೆಯನ್ನು ಸೃಷ್ಟಿಸಲಾಗಿದೆ.

🔷Q). 2018 ರ ಫೆಬ್ರುವರಿ 21 ರಂದು ಯಾವ ನಟರು ತಮ್ಮ ರಾಜಕೀಯ ಪಕ್ಷದ ಹೆಸರು ಘೋಷಣೆ ಮಾಡಲಿದ್ದಾರೆ?

a) ಪವನ್ ಕಲ್ಯಾಣ
b) ರಜನಿಕಾಂತ್
c) ಕಮಲ್ ಹಾಸನ್
d) ಸಂಜಯ್ ದತ್
Answer) Description:
ಕಮಲ್ ಹಾಸನ್ # 2018 ರ ಫೆಬ್ರುವರಿ 21 ರಂದು ತಮಿಳುನಾಡಿನ ಚಿತ್ರನಟ ಕಮಲ್ ಹಾಸನ್ ಅವರು ತಮಿಳುನಾಡಿನ ರಾಮನಾಥಪುರದಲ್ಲಿ ತಮ್ಮ ರಾಜಕೀಯ ಪಕ್ಷದ ಹೆಸರು ಘೋಷಣೆ ಮಾಡಿದ ನಂತರ ಅಂದಿನಿಂದಲೇ ರಾಜ್ಯ ವ್ಯಾಪಿ ಪ್ರವಾಸವನ್ನೂ ಆರಂಭಿಸಲಿದ್ದಾರೆ.

🔷Q). ಇತ್ತೀಚೆಗೆ ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾರತೀಯ ವಾಯುಪಡೆಯ ಯಾವ ಯುದ್ದ ವಿಮಾನದಲ್ಲಿ ಹಾರಾಟ ನಡೆಸಿದರು?

a) ತೇಜಸ್ ಯುದ್ದ ವಿಮಾನ
b) ಸುಖೋಯ್ -29 ಯುದ್ದ ವಿಮಾನ
c) ಸುಖೋಯ್ - 30 ಯುದ್ದ ವಿಮಾನ
d) ಇಂದ್ರಧನುಷ ಯುದ್ದ ವಿಮಾನ
Answer) Description:
ಸುಖೋಯ್ - 30 ಯುದ್ದ ವಿಮಾನ # 2018 ರ ಜನೇವರಿ 17 ರಂದು ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜೋಧಪುರ ವಾಯುನೆಲೆಯಲ್ಲಿ ಪೈಲಟ್ ಗಳ ತರಬೇತಿಗೆ ಎಂದು ಮೀಸಲಿರಿಸಿರುವ ಸುಖೋಯ್ - 30 ಎಂ.ಕೆ.ಐ ಯುದ್ದ ವಿಮಾನದ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದ ಅವರು 45 ನಿಮಿಷ ಹಾರಾಟ ನಡೆಸಿದರು.

🔷Q). ಇತ್ತೀಚೆಗೆ ರಾಜ್ಯ ಸಚಿವ ಸಂಪುಟ ಸಭೆಯು ಯಾವ ಬಂದರು ಮೂಲಕ ಕಬ್ಬಿಣದ ಅದಿರನ್ನು ಅಕ್ರಮವಾಗಿ ವಿದೇಶಕ್ಕೆ ಸಾಗಿಸಿದ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ದಳಕ್ಕೆ ಒಪ್ಪಿಸಲು ಅನುಮತಿ ನೀಡಿದೆ?

a) ನವ ಮಂಗಳೂರು ಬಂದರು ಮತ್ತು ಬೇಲೆಕೇರಿ ಬಂದರು.
b) ಮರ್ಮಗೋವಾ ಬಂದರು ಮತ್ತು ಪಣಜಿ ಬಂದರು.
c) ಬೇಲೆಕೇರಿ ಬಂದರು ಮತ್ತು ಮರ್ಮಗೋವಾ ಬಂದರು
d) ಮೇಲಿನ ಎಲ್ಲವೂ
Answer) Description:
ಮೇಲಿನ ಎಲ್ಲವೂ # 2018 ರ ಜನೇವರಿ 17 ರಂದು ರಾಜ್ಯ ಸಚಿವ ಸಂಪುಟ ಸಭೆಯು ರಾಜ್ಯದ ನವಮಂಗಳೂರು, ಬೇಲೆಕೇರಿ, ಗೋವಾದ ಮರ್ಮಗೋವಾ ಮತ್ತು ಪಣಜಿ ಬಂದರುಗಳ ಮೂಲಕ ಕಬ್ಬಿಣದ ಅದಿರನ್ನು ಅಕ್ರಮವಾಗಿ ವಿದೇಶಕ್ಕೆ ಸಾಗಿಸಿದ ಪ್ರಕರಣವನ್ನು ವಿಶೇಷ ತನಿಖಾ ದಳಕ್ಕೆ(ಎಸ್.ಐ.ಟಿ) ಒಪ್ಪಿಸಲು ಅನುಮತಿ ನೀಡಿದೆ.

                      ಧನ್ಯವಾದಗಳು

No comments:

Post a Comment