#ಸಾಮನ್ಯ_ವಿಜ್ಞಾನ #ಸಂಗ್ರಹ ವಿಶಾಲ ವಿಶ್ವ #ಶಿಕ್ಷಕರು
1. ಪೇರೆಂಕೈಮಾದ ಜೀವಕೋಶಗಳಲ್ಲಿ ಕ್ಲೋರೋಪ್ಲಾಸ್ಟ್ ಗಳಿದ್ದಲ್ಲಿ, ಅದಕ್ಕೆ ಈ ಹೆಸರಿದೆ__________
ಎ) ಏರೆಂಕೇಮಾ ●ಬಿ) ಕ್ಲೋರಂಕೈಮಾ ಸಿ) ಕೋಲಂಕೈಮಾ ಡಿ) ಸ್ಕ್ಲೀರಂಕೈಮಾ
2. ಫ್ಲೋಯಂ ಅಂಗಾಂಶದಲ್ಲಿನ ವಾಹಕ ಘಟಕಗಳು ______
●ಎ) ಜರಡಿ ನಳಿಕೆಗಳು ಬಿ) ತಂತುಗಳು ಸಿ) ಟ್ರೇಕಿಯಾಗಳು ಡಿ) ಟ್ರೇಕಿಡ್ ಗಳು
3. ಕ್ಸೈಲಂ ಅಂಗಾಂಶವು ಸಾಗಾಣೆ ಮಾಡುವುದು _________
ಎ) ನೀರನ್ನು ಮಾತ್ರ ಬಿ) ಆಹಾರವನ್ನು ಮಾತ್ರ ಸಿ ) ಆಹಾರ ಮತ್ತು ನೀರು ●ಡಿ) ನೀರು ಮತ್ತು ಲವಣಗಳು
4. ಎಂಡೋಥೀಲಿಯಂ ಎಂಬ ಹೆಸರು ಇದಕ್ಕೆ ಅನ್ವಯಿಸುತ್ತದೆ ____________
ಎ) ಸ್ತಂಭಾಕೃತಿ ಅನುಲೇಪಕ ಬಿ) ಕಶಾಂಗ ಸಹಿತ ಅನುಲೇಪಕ ಸಿ) ಘನಾಕೃತಿ ಅನುಲೇಪಕ ●ಡಿ) ಚಪ್ಪಟೆ ಅನುಲೇಪಕ
5. ಪ್ರಾಣಿಗಳಲ್ಲಿ __________ದಲ್ಲಿ ಕೊಬ್ಬು ಸಂಗ್ರಹವಾಗುತ್ತದೆ.
ಎ) ಏರಿಯೋಲಾರ್ ಅಂಗಾಂಶ ಬಿ) ಮೃದ್ವಸ್ಥಿ ಅಂಗಾಂಶ ●ಸಿ) ಅಡಿಫೋಸ್ ಅಂಗಾಂಶ ಡಿ) ರೆಟಿಕ್ಯುಲಾರ್ ಅಂಗಾಂಶ
6. ನರ ಅಂಗಾಂಶದ ರಚನೆಯ ಮತ್ತು ಕಾರ್ಯದ ಮೂಲ ಘಟಕ ಇದು ___________
●ಎ) ನ್ಯೂರಾನ್ ಬಿ) ಆಕ್ಸಾನ್ ಸಿ) ಡೆಂಡ್ರೈಟ್ ಡಿ) ಮಯಲಿನ್
ಈ ಕೆಳಗಿನ ಜೋಡಿಗಳಿಗೆ ಹೊಲಿಕೆ ಪದಗಳನ್ನು ನೀಡಿ
1. ಹೃದಯ : ಅನೈಚ್ಛಿಕ ಸ್ನಾಯು : : ಕಾಲುಗಳು : ಐಚ್ಛಿಕ ಸ್ನಾಯು
2. ಅಡಿಫೋಸ್ ಅಂಗಾಂಶ : ದೇಹದ ತಾಪ : : ಏರಿಯೋಲಾರ್ ಅಂಗಾಂಶ : ದೇಹದ ರಕ್ಷಣೆ ( ಚರ್ಮಕ್ಕೆ ಅಂಗಾಂಶ ಬಂಧಿಸುವುದು)
3. ಕ್ಷೈಲಂ : ನೀರಿನ ಸಾಗಾಣೆ : : ಫ್ಲೋಯಂ : ಆಹಾರ ಸಾಗಾಣಿಕೆ
4. ಕ್ಯಾಲ್ಸಿಯಂ : ಮೂಳೆ : : ಕಬ್ಬಿಣ : ರಕ್ತ
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ
1. ಅಂಗಾಂಶ ಎಂದರೇನು ?
ಒಂದು ನಿರ್ದಿಷ್ಟ ಮೂಲದಿಂದ ಬಂದ, ಒಂದೇ ರೀತಿಯ ರಚನೆ ಹಾಗೂ ಕಾರ್ಯ ಗಳನ್ನು ಮಾಡುವ ಜೀವಕೋಶದ ಗುಂಪಿಗೆ ಅಂಗಾಂಶ ಎನ್ನುವರು.
2. ಅನುಲೇಪಕ ಅಂಗಾಂಶದ ಕಾರ್ಯಗಳೇನು ?
· ಚರ್ಮದಲ್ಲಿ ಅನುಲೇಪಕ ಅಂಗಾಂಶವು ತಮ್ಮ ಕೆಳಗಿರುವ ಅಂಗಾಂಶಗಳನ್ನು ರಕ್ಷಿಸುವ ಒಂದು ದಪ್ಪ ಪೊರೆಯಂತೆ ಕೆಲಸ ಮಾಡುತ್ತದೆ
· ದೇಹದ ತಾಪಮಾನವನ್ನು ಕಾಪಾಡುವಲ್ಲಿ ನೆರವಾಗುತ್ತದೆ.
· ಜ್ಞಾನೇಂದ್ರಿಯಗಳಲ್ಲಿರುವ ಅನುಲೇಪಕ ಅಂಗಾಂಶದಲ್ಲಿ ವಿಶಿಷ್ಟ ಗ್ರಾಹಕ ಕೋಶಗಳಿವೆ
· ಕಶಾಂಗ ಸಹಿತ ಅನುಲೇಪಕ ಅಂಗಾಂಶವು ವಸ್ತುಗಳ ಸಾಗಾಣಿಕೆಯಲ್ಲಿ ನೆರವಾಗುತ್ತದೆ
· ಪೋಷಕಾಂಶಗಳ ಹೀರಿಕೆ ಮತ್ತು ತ್ಯಾಜ್ಯ ವಸ್ತುಗಳ ವಿಸರ್ಜನೆಯಲ್ಲಿ ನೆರವಾಗುತ್ತದೆ
3. ನೀರಿನ ಸಾಗಣೆ ಮಾಡುವ ಕ್ಸೈಲಂನ ಘಟಕಗಳನ್ನು ಹೆಸರಿಸಿ.
ಕ್ಸೈಲಂ ನಳಿಕೆ ಮತ್ತು ಟ್ರೇಕಿಡ್
4. ಫ್ಲೋಯಂ ಅಂಗಾಂಶದ ಆರ್ಥಿಕ ಪ್ರಾಮುಖ್ಯವೇನು ?
ಫ್ಲೋಯಂ ನಾರು ಆರ್ಥಿಕವಾಗಿ ತುಂಬಾ ಮಹತ್ವದಾಗಿದೆ. ಸೆಣಬು ಮತ್ತು ಹೆಂಪ್ ಗಳಲ್ಲಿನ ಫ್ಲೋಯಂ ನಾರು ಗೋಣಿಚೀಲ ಮತ್ತು ಹಗ್ಗ ತಯಾರಿಕೆಯಲ್ಲಿ ಬಳಸುತ್ತಾರೆ.
5. ಕ್ಸೈಲಂ ಮತ್ತು ಫ್ಲೋಯಂಗಳನ್ನು ವಾಹಕ ಅಂಗಾಂಶಗಳು ಎಂದು ಕರೆಯಲು ಕಾರಣವೇನು ?
ಕ್ಸೈಲಂ ನೀರು ಸಾಗಾಣಿಕೆಯಲ್ಲಿ ಮತ್ತು ಫ್ಲೋಯಂ ಆಹಾರ ಸಾಗಾಣಿಕೆಯಲ್ಲಿ ನೆರವು ಮಾಡುವುದರಿಂದ ಇವುಗಳಿಗೆ ವಾಹಕ ( ಸಾಗಾಣಿಕಾ ) ಅಂಗಾಂಶ ಎನ್ನುವರು.
6. ಏರಿಯೋಲಾರ್ ಅಂಗಾಂಶದ ಕಾರ್ಯಗಳೇನು ?
ಏರಿಯೋಲಾರ್ ಅಂಗಾಂಶವು ಚರ್ಮಕ್ಕೆ ಸ್ನಾಯುಗಳನ್ನು ಬಂಧಿಸುವಲ್ಲಿ ನೆರವಾಗುತ್ತದೆ. ಇವು ಪ್ರತಿಕಾಯಗಳನ್ನು ಉತ್ಪತ್ತಿ ಮಾಡುತ್ತದೆ. ಏರಿಯೋಲಾರ್ ಅಂಗಾಂಶದಲ್ಲಿ ಕಂಡುಬರುವ ಮ್ಯಾಕ್ರೋಫೆಜ್ ಸೂಕ್ಷ್ಮಜೀವಿಗಳನ್ನು ಭಕ್ಷಿಸುವ ಮೂಲಕ ದೇಹಕ್ಕೆ ರಕ್ಷಣೆ ಕೊಡುತ್ತದೆ.
7. ದುಗ್ಥರಸ ದೇಹಕ್ಕೆ ಯಾವ ರೀತಿ ರಕ್ಷಣೆ ನೀಡುತ್ತದೆ ?
ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆಯ ಅತ್ಯವಶ‍್ಯಕ ಘಟಕಗಳಾದ ಪ್ರತಿಕಾಯಗಳನ್ನು ದುಗ್ಥರಸ ಉತ್ಪಾದಿಸುತ್ತದೆ. ಒಂದು ಬಗೆಯ ಬಿಳಿ ರಕ್ತಕಣಗಳಾದ, ಲಿಂಫೋಸೈಟ್ ಕೋಶಗಳು ಬ್ಯಾಕ್ಟೀರಿಯಾ ಮತ್ತು ಅನವಶ್ಯಕ ವಸ್ತುಗಳನ್ನು ನಿರ್ಮೂಲನ ಮಾಡುವಲ್ಲಿ ನೆರವಾಗುತ್ತದೆ.
8. ಹೃದಯ ಸ್ನಾಯುವಿನ ವಿಶಿಷ್ಟ ಲಕ್ಷಣಗಳಾವುವು ?
· ಸ್ನಾಯು ತಂತುಗಳು ನೀಳವಾಗಿ ಕೊಳವೆಯಾಕಾರದಲ್ಲಿದ್ದು, ಶಾಖೆಗಳಾಗಿ ಒಡೆಯುತ್ತದೆ.
· ಶಾಖೆಗಳು ಪರಸ್ಪರ ಸಂಬಂಧಿಗಳು
· ಅನೈಚ್ಛಿಕ ಸ್ನಾಯುಗಳಾಗಿದ್ದು ಲಯಬದ್ಧವಾಗಿ ಸಂಕುಚನ ಮತ್ತು ವಿಕಸನ ತೋರುತ್ತವೆ.
· ಹೃದಯದಲ್ಲಿ ಮಾತ್ರ ಕಂಡುಬರುತ್ತದೆ
· ಈ ಸ್ನಾಯುಗಳು ಆಯಾಸಗೊಳ್ಳುವುದಿಲ್ಲ
ಹೆಚ್ಚುವರಿ ಪ್ರಶ್ನೆ
ಬಿಟ್ಟ ಸ‍್ಥಳ ತುಂಬಿರಿ
1. ಒಂದು ನಿರ್ದಿಷ್ಟ ಮೂಲದಿಂದ ಬಂದ, ಒಂದೇ ರೀತಿಯ ರಚನೆ ಹಾಗೂ ಕಾರ್ಯ ಗಳನ್ನು ಮಾಡುವ ಜೀವಕೋಶದ ಗುಂಪು- ಅಂಗಾಂಶ
2. ನಿರ್ದಿಷ್ಟ ಕಾರ್ಯವನ್ನು ನಿರ್ವಹಿಸಲು ಜೊತೆಗೂಡಿದ ಅಂಗಾಂಶಗಳ ಗುಂಪು – ಅಂಗ
3. ನಿರ್ದಿಷ್ಟ ಕಾರ್ಯವನ್ನು ನಿರ್ವಹಿಸಲು ಜೊತೆಗೂಡಿದ ಅಂಗಗಳ ಗುಂಪು- ಅಂಗ ವ್ಯವ್ಯಸ್ಥೆ
4. ಸಸ್ಯದ ಬೆಳವಣಿಗೆಗಾಗಿಯೇ ಇರುವ ಅಂಗಾಂಶ- ವರ್ಧನ ಅಂಗಾಂಶ
5. ಸಸ್ಯದ ಸುತ್ತಳತೆ ಹೆಚ್ಚುವುದಕ್ಕೆ ಕಾರಣವಾದ ಅಂಗಾಂಶ- ಪಾರ್ಶ್ವ ವರ್ಧನ ಅಂಗಾಂಶ
6. ಸಸ್ಯದ ಎತ್ತರ ಹೆಚ್ಚುವುದಕ್ಕೆ ಕಾರಣವಾಗುವ ಅಂಗಾಂಶ- ತುದಿ ವರ್ಧನ ಅಂಗಾಂಶ
7. ಎಲ್ಲಾ ಶಾಶ್ವತ ಅಂಗಾಂಶಗಳೂ ವರ್ಧನ ಅಂಗಾಂಶಗಳಿಂದಲೇ ಉತ್ಪತ್ತಿಯಾಗುವುದು.
8. ಒಂದೇ ರೀತಿಯ ಜೀವಕೋಶಗಳು ಹಾಗೂ ಒಂದೇ ರೀತಿಯ ಕಾರ್ಯ ನಿರ್ವಹಿಸುವ ಸಸ್ಯ ಅಂಗಾಂಶ – ಸರಳ ಶಾಶ್ವತ ಅಂಗಾಂಶ
9. ಹೂ, ಎಲೆ ಹಾಗೂ ಕಾಂಡಗಳ ಮೃದುತ್ವಕ್ಕೆ ಕಾರಣವಾದ ಅಂಗಾಂಶ- ಪೇರಂಕೈಮಾ
10. ಸಜೀವ ಆಧಾರ ಅಂಗಾಂಶ- ಕೋಲಂಕೈಮಾ
11. ನಿರ್ಜೀವ ಆಧಾರ ಅಂಗಾಂಶ- ಸ್ಕ್ಲೀರಂಕೈಮಾ
12. ಹಣ್ಣು ಮತ್ತು ಬೀಜದ ಕವಚಗಳಲ್ಲಿ ಕಂಡುಬರುವ ಸ್ಕ್ಲೀರಂಕೈಮಾ ಅಂಗಾಂಶ ವಿಧ- ಸ್ಕ್ಲೀರೈಡ್
13. ಕೋಲಂಕೈಮಾದ ಕೋಶಭಿತ್ತಿಯಲ್ಲಿ ಹೆಮಿ ಸೆಲ್ಯುಲೋಸ್ ಅಥವಾ ಪೆಕ್ಟಿನ್ ಕಂಡುಬರುತ್ತದೆ.
14. ಸ್ಕ್ಲೀರೈಡ್ ಗಳನ್ನು ಸಾಮಾನ್ಯವಾಗಿ ಕಲ್ಲುಕೋಶ ಎಂದು ಕರೆಯುವರು.
15. ಸಸ್ಯದ ನೀರು ಸಾಗಾಣಿಕಾ ಅಂಗಾಂಶ- ಕ್ಸೈಲಂ
16. ಸಸ್ಯದ ಆಹಾರ ಸಾಗಾಣಿಕಾ ಅಂಗಾಂಶ- ಫ್ಲೋಯಂ
17. ಚಪ್ಪಟೆ ಅನುಲೇಪಕ ಅಂಗಾಂಶವನ್ನು ನೆಲಗಚ್ಚು ಅಂಗಾಂಶ ಎಂದೂ ಕರೆಯುವರು.
18. ಸ್ನಾಯು ಅಂಗಾಂಶದ ಜೀವಕೋಶ – ಸ್ನಾಯು ತಂತು
19. ದೇಹದ ಭಾಗಗಳ ಚಲನೆಗೆ ಕಾರಣವಾದ ಅಂಗಾಂಶ – ಸ್ನಾಯು ಅಂಗಾಂಶ
No comments:
Post a Comment