Saturday, 10 March 2018

General knowledge

ಸಾಮಾನ್ಯ ಜ್ಞಾನ

1. ಕರ್ನಾಟಕದ ಮೊದಲ ಬ್ಯಾಂಕ್ ಯಾವುದು?

2. ಕನ್ನಡದ ಮೊದಲ ವರ್ಣ ಚಿತ್ರ ಯಾವುದು?

3. ಕಾವ್ಯಾನಂದ ಇದು ಯಾರ ಕಾವ್ಯ ನಾಮ?

4. ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ಎಲ್ಲಿ ನಡೆಯಿತು?

5. ಕಡಲ ತೀರದ ಕಾಳು ಮೆಣಸಿನ ರಾಣಿ ಎಂದು ಯಾರನ್ನು ಕರೆಯುತ್ತಾರೆ?

6. ಕನ್ನಡದ ಮೊದಲ ಐತಿಹಾಸಿಕ ಚಲನಚಿತ್ರ ಯಾವುದು?

7. ದಕ್ಷಿಣ ಏಷ್ಯಾದ ಮೊದಲ ಪಾಲಿಟೆಕ್ನಿಕ್ ಯಾವುದು?

8. ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು?

9. ಕನ್ನಡದ ಪ್ರಥಮ ಮಹಮದೀಯ ಕವಿ ಯಾರು?

10. ಕನ್ನಡ ಸಾಹಿತ್ಯ ಸಮ್ಮೇಳನವೊಂದರ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಮೊದಲ ಕನ್ನಡತಿ ಯಾರು?

ಸರಿ ಉತ್ತರಗಳು

1. ಚಿತ್ರದುರ್ಗ ಬ್ಯಾಂಕ್ ಲಿಮಿಟೆಡ್ (೧೮೭೦)

2. ಅಮರ ಶಿಲ್ಪಿ ಜಕಣಾಚಾರಿ

3. ಸಿದ್ದಯ್ಯ ಪುರಾಣಿಕ್

4. ಅಂಕೋಲಾ (ಉತ್ತರ ಕನ್ನಡ ಜಿಲ್ಲೆ)

5. ರಾಣಿ ಅಬ್ಬಕ್ಕ

6. ರಣಧೀರ ಕಂಠೀರವ

7. ಬೆಂಗಳೂರಿನ ಶ್ರೀ ಜಯ ಚಾಮರಾಜೇಂದ್ರ ಪಾಲಿಟೆಕ್ನಿಕ್ ಇನ್‌ಸ್ಟಿಟ್ಯೂಟ್

8. ಡಾ|| ಕುವೆಂಪು

9. ಸಂತ ಶಿಶುನಾಳ ಷರೀಪರು

10. ಜಯದೇವಿತಾಯಿ ಲಿಗಾಡೆ (೧೯೭೪ ಮಂಡ್ಯ)

No comments:

Post a Comment