*##ಮಾಹಿತಿ ವೇದಿಕೆ##*
*ಫಿಫಾ ರ‍್ಯಾಂಕಿಂಗ್: ಭಾರತಕ್ಕೆ 99ನೇ ಸ್ಥಾನ*
##############
*ನವದೆಹಲಿ (ಪಿಟಿಐ): ಭಾರತ ಫುಟ್‌ಬಾಲ್ ತಂಡವು ಫಿಫಾ ವಿಶ್ವ ರ‍್ಯಾಂಕಿಂಗ್ ಪಟ್ಟಿಯಲ್ಲಿ ಈ ವರ್ಷ ಮೊದಲ ಬಾರಿಗೆ 100ರೊಳಗಿನ ಸ್ಥಾನ ಪಡೆದುಕೊಂಡಿದೆ.*
#########₹#####
*ಗುರುವಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಭಾರತ ತಂಡವು ಮೂರು ಸ್ಥಾನಗಳಲ್ಲಿ ಏರಿಕೆಯಾಗಿದೆ. ಇದರಿಂದಾಗಿ 99ನೇ ಸ್ಥಾನ ಪಡೆದುಕೊಂಡಿದೆ. ಭಾರತ ತಂಡದ ಬಳಿ 339 ಪಾಯಿಂಟ್ಸ್‌ಗಳು ಇವೆ. ಲಿಬಿಯಾ ಕೂಡ ಇದೇ ಸ್ಥಾನವನ್ನು ಹಂಚಿಕೊಂಡಿದೆ.*
##############
*ವಿಶ್ವ ಚಾಂಪಿಯನ್ ಜರ್ಮನಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ನಂತರದಲ್ಲಿ ಬ್ರೆಜಿಲ್, ಪೋರ್ಚುಗಲ್, ಅರ್ಜೆಂಟೀನಾ, ಬೆಲ್ಜಿಯಂ, ಪೋಲೆಂಡ್, ಸ್ಪೇನ್, ಸ್ವಿಟ್ಜರ್‌ಲೆಂಡ್, ಫ್ರಾನ್ಸ್ ಮತ್ತು ಚಿಲಿ ತಂಡಗಳು ಇವೆ.*
#############₹
*ಹೋದ ವರ್ಷ ಭಾರತ ಮೂರು ಬಾರಿ 100ರೊಳಗಿನ ಸ್ಥಾನ ಪಡೆದಿತ್ತು. ಜುಲೈನಲ್ಲಿ 96ನೇ ಸ್ಥಾನ ಗಳಿಸಿತ್ತು. ಏಷ್ಯಾಮಟ್ಟದಲ್ಲಿ ಭಾರತಕ್ಕೆ 13ನೇ ಸ್ಥಾನ ಲಭಿಸಿದೆ. ಕತಾರ್, ಒಮನ್, ಜೋರ್ಡನ್, ಬಹರೇನ್ ಮತ್ತು ಉತ್ತರ ಕೊರಿಯ ತಂಡಗಳು ಭಾರತದ ನಂತರದ ಸ್ಥಾನಗಳಲ್ಲಿವೆ.*
#############₹#
*ಇರಾನ್ (ಒಟ್ಟಾರೆ 33ನೇ ಸ್ಥಾನ) ಅಗ್ರಸ್ಥಾನದಲ್ಲಿದೆ. ನಂತರದಲ್ಲಿ ಆಸ್ಟ್ರೇಲಿಯಾ (37) ಹಾಗೂ ಜಪಾನ್ (55) ತಂಡಗಳು ಇವೆ.*
##############
*ಭಾರತ ತಂಡ ಮಾರ್ಚ್27ರಂದು ನಡೆಯುವ ಎಎಫ್‌ಸಿಏಷ್ಯನ್ ಕಪ್ ಕ್ವಾಲಿಫೈಯರ್ ಪಂದ್ಯದಲ್ಲಿ ಕಿರ್ಗಿಸ್ ರಿಪಬ್ಲಿಕ್ ಎದುರು ಆಡಲಿದೆ.*
No comments:
Post a Comment