━━━━━━━━━━━━━━━━━━━━
💥#ಸಾಮಾನ್ಯ_ಜ್ಞಾನ💥
━━━━━━━━━━
➖➖➖➖➖➖
🔰ಲೋಕಸಭೆಗೆ ಆಯ್ಕೆಯಾಗಲು ಇರುವ ಕನಿಷ್ಠ
ವಯೋಮಾನ ____ ವರ್ಷಗಳು.
— 25
🔰 2014 ನೇ ಸಾಲಿನ ಏಷ್ಯನ್ ಗೇಮ್ಸ್ ನಲ್ಲಿ ಪುರುಷರ ವಿಭಾಗದ 50 ಮೀ. ಪಿಸ್ತೂಲು ಶೂಟಿಂಗ್ ವಿಭಾಗದಲ್ಲಿ ಚಿನ್ನದ ಪಡೆದವರು ಯಾರು?
— ಜೀತು ರಾಯ್
🔰‘ಭಾರತ ರತ್ನ’ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಯಾರು?
— ಸಿ. ರಾಜಗೋಪಾಲಾಚಾರಿ
🔰 ಇತ್ತೀಚೆಗೆ 2010 ರಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ಕವಿ ಯಾರು?
— ಚಂದ್ರಶೇಖರ ಕಂಬಾರ್
🔰 ‘ಸಂಸ್ಕಾರ’ ಪುಸ್ತಕವನ್ನು ಬರೆದ ಲೇಖಕರು ಯಾರು?
— ಯು.ಆರ್.ಅನಂತಮೂರ್ತಿ
🔰 ಗಡಿ ಭದ್ರತಾ ಪಡೆ (BSF) ಇದೊಂದು,
— ಯಾವುದೂ ಅಲ್ಲ
🔰ಗ್ರಾಮೀಣ ಪ್ರದೇಶಗಳಲ್ಲಿ ಒಂದು ಸ್ವಚ್ಛ, ಮಾಲಿನ್ಯ ರಹಿತ ಮತ್ತು ಅಗ್ಗವಾದ ಶಕ್ತಿಯ ಆಕರವಾಗಿದೆ.
— ಬಯೋಗ್ಯಾಸ್
🔰ಶಬ್ದವನ್ನು ಅಳೆಯುವ ಮಾನಕ್ಕೆ ಏನೆಂದು ಕರೆಯುತ್ತಾರೆ?
— ಡೆಸಿಬಲ್
🔰 ಈ ಕೆಳಗಿನವುಗಳಲ್ಲಿ ಯಾವುದು ಹಸಿರು ಮನೆಯ ಅನಿಲ ಆಗಿರುವುದಿಲ್ಲ.
— ಆಮ್ಲಜನಕ
🔰 ಅತಿಹೆಚ್ಚು ಕಾಲ ಬದುಕಬಲ್ಲ ಪ್ರಾಣಿ ಯಾವುದು?
— ಆಮೆ
🔰ಭಾರತ ಸರ್ಕಾರದ ಇಂದಿನ ಹಣಕಾಸು ಸಚಿವರು ಯಾರು?
— ಅರುಣ್ ಜೇಟ್ಲಿ
🔰 ಈ ಕೆಳಗೆ ಹೆಸರಿಸಿರುವ ಯಾವ ಕ್ರೀಡಾಪಟುವಿಗೆ 2014ನೇ ಸಾಲಿನಲ್ಲಿ ‘ಅರ್ಜುನ ಪ್ರಶಸ್ತಿ’ ಬಂದಿರುತ್ತದೆ?
— ಗಿರೀಶ್ ಹೆಚ್.ಎನ್.
🔰 ‘ಲುಫ್ತಾನ್ಸಾ ಏರ್ ಲೈನ್ಸ್’ ಯಾವ ದೇಶದ ವಿಮಾನಯಾನ ಸಂಸ್ಥೆ?
— ಜರ್ಮನಿ
🔰ಶ್ರವಣಬೆಳಗೊಳದಲ್ಲಿರುವ ಗೊಮ್ಮಟೇಶ್ವರ ಮೂರ್ತಿಯನ್ನು ಸ್ಥಾಪಿಸಿದವರು ಯಾರು?
— ಚಾವುಂಡರಾಯ
🔰 ಹೊಂದಿಸಿ ಬರೆಯಿರಿ:
ಎ) ಅಲ್ಯುಮಿನಿಯಂ 1)ಬಳ್ಳಾರಿ
ಬಿ) ಕಬ್ಬಿಣ. 2) ಹಾಸನ
ಸಿ) ಚಿನ್ನ. 3)ಬೆಳಗಾವಿ
ಡಿ) ಕ್ರೋಮಿಯಂ. 4)ರಾಯಚೂರು
— ಡಿ) ಎ-3, ಬಿ-1, ಸಿ-4, ಡಿ-2
🔰ಆಹಾರದಲ್ಲಿ ಅಯೋಡಿನ್ ಕೊರತೆಯಿಂದ ಯಾವ ಸಮಸ್ಯೆ ಉಂಟಾಗುತ್ತದೆ.
— ಸರಳ ಗಾಯಿಟರ್
🔰 ಪಿಟ್ಯೂಟರಿ ಗ್ರಂಥಿಯು ಮಾನವ ದೇಹದ ಯಾವ ಭಾಗದ ಒಳಗೆ ಇರುತ್ತದೆ?
— ತಲೆ
🔰 ಜೀವ ವಿಕಾಸದ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದಕ್ಕೆ ಅತ್ಯಂತ ಸಮ್ಮತ ವಿವರಣೆಯನ್ನು ನೀಡಿದ
ವಿಜ್ಞಾನಿ ಯಾರು?
— ಚಾರ್ಲ್ಸ್ ಡಾರ್ವಿನ್
🔰 ಭಾರತೀಯ ರಿಸರ್ವ್ ಬ್ಯಾಂಕ್ ನ ಈಗಿನ ಮುಖ್ಯಸ್ಥರು ಯಾರು?
— ಡಾ. ಉಜಿ೯ತ್ ಪಟೇಲ್.
🔰ಕರ್ನಾಟಕದ ಇಂದಿನ ರಾಜ್ಯಪಾಲರು ಯಾರು?
— ವಜುಭಾಯ್ ವಾಲ
🔰ರಮೇಶನು ತನ್ನ ಕಾರಿನಲ್ಲಿ ‘ಎ’ ನಗರದಿಂದ ‘ಬಿ’ ನಗರಕ್ಕೆ ಗಂಟೆಗೆ ಸರಾಸರಿ 40ಕಿ.ಮೀ. ವೇಗದಲ್ಲಿ ಪ್ರಯಾಣಿಸಿದ್ದು,‘ಎ’ ನಗರದಿಂದ ‘ಬಿ’ ನಗರಕ್ಕಿರುವ ದೂರ
60 ಕಿ.ಮೀ. ಆಗಿರುತ್ತದೆ.ಹಾಗಾದರೆ ರಮೇಶನು ತನ್ನ ಕಾರಿನಲ್ಲಿ ‘ಎ’ ನಗರದಿಂದ ‘ಬಿ’ ನಗರಕ್ಕೆ ತಲುಪಲು ತೆಗೆದುಕೊಂಡ ಸಮಯ
— 90 ನಿಮಿಷಗಳ
🔰 ಈ ಸರಣಿಯ ಮುಂದಿನ ಸರಣಿಯನ್ನು ಬರೆಯಿರಿ, ACE,BDF, CEG, _
— DFH
🔰 ಪೈಥಾಗೊರಾಸ್ ಪ್ರಮೇಯದ ವ್ಯಾಖ್ಯಾನ,
— ಒಂದು ಲಂಬಕೋನ ತ್ರಿಭುಜದಲ್ಲಿ, ವಿಕರ್ಣದ ಮೇಲಿನ ವರ್ಗವು ಉಳಿದೆರಡು ಬಾಹುಗಳ ಮೇಲಿನ ವರ್ಗಗಳ ಮೊತ್ತಕ್ಕೆ ಸಮನಾಗಿರುತ್ತದೆ.
🔰 ಕರ್ನಾಟಕದಲ್ಲಿರುವ ಒಟ್ಟು ಜಿಲ್ಲೆಗಳ ಸಂಖ್ಯೆ ಎಷ್ಟು?
— 30
🔰 ದ.ರಾ.ಬೇಂದ್ರೆಯವರ ಯಾವ ಕೃತಿಗೆ ‘ಜ್ಞಾನಪೀಠ
ಪ್ರಶಸ್ತಿ’ ಲಭಿಸಿದೆ?
— ನಾಕುತಂತಿ
🔰 2014 ನೇ ಸಾಲಿನ ಏಷ್ಯನ್ ಗೇಮ್ಸ್ ಎಲ್ಲಿ ನಡೆಯಿತು?
— ಇಂಚಿಯಾನ್ (ದಕ್ಷಿಣ ಕೊರಿಯಾ)
🔰ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪರವರ ಕಾವ್ಯನಾಮ ಯಾವುದು?
— ಕುವೆಂಪು
🔰 ಈ ಕೆಳಗೆ ಹೆಸರಿಸಿರುವ ಯಾರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಲಭಿಸಿದೆ?
— ಡಾ. ರಾಜ್ ಕುಮಾರ್
🔰 ಈ ಕೆಳಕಂಡ ಯಾವ
ದೇಶಗಳಲ್ಲಿ 2015 ನೇ ಸಾಲಿನ ವಿಶ್ವಕಪ್ ಕ್ರಿಕೆಟ್ ನಡದಿತ್ತು
—ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್
🔰 ಕರ್ನಾಟಕ ಏಕೀಕರಣಗೊಂಡ ಬಳಿಕ ಅಧಿಕಾರಕ್ಕೆ ಬಂದ ಮೊದಲ ಮುಖ್ಯಮಂತ್ರಿ ಯಾರು?
— ಎಸ್. ನಿಜಲಿಂಗಪ್ಪ
🔰 ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಏನೆಂದು ಮರುನಾಂಕರಣ ಮಾಡಲಾಗಿದೆ?
— ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
🔰 ವಿಶ್ವ ಆರೋಗ್ಯ ಸಂಸ್ಥೆಯ ಕೇಂದ್ರ ಸ್ಥಾನ ಎಲ್ಲಿದೆ?
— ಜಿನೆವಾ (ಸ್ವಿಡ್ಜರ್ ಲ್ಯಾಂಡ್)
🔰 ರಕ್ತದ ಒತ್ತಡವನ್ನ ಅಳೆಯುವ ಉಪಕರಣ ಯಾವುದು?
— ಸಿಗ್ಮೋಮಾನೋಮೀಟರ್
🔰 1843 ರಲ್ಲಿ ಪ್ರಾರಂಭವಾದ ಕನ್ನಡ ಪತ್ರಿಕೋದ್ಯಮದ ಪ್ರಥಮ ಪತ್ರಿಕೆ ಯಾವುದು?
— ಮಂಗಳೂರು ಸಮಾಚಾರ
🔰 ಕನೌಜದ ರಾಜ ಹರ್ಷವರ್ಧನನನ್ನು ಸೋಲಿಸಿದ ರಾಜ ಯಾರು?
— ಇಮ್ಮಡಿ ಪುಲಕೇಶಿ
🔰 ‘ರಾಜೀವ್ ಗಾಂಧಿ ಖೇಲ್ ರತ್ನ’ ಪ್ರಶಸ್ತಿಯನ್ನು ಪ್ರಥಮ ಬಾರಿಗೆ ಪಡೆದವರು ಯಾರು?
— ವಿಶ್ವನಾಥನ್ ಆನಂದ್
🔰 ಟಿಪ್ಪು ಸುಲ್ತಾನನು ಬ್ರಿಟಿಷರೊ ಂದಿಗೆ ಯುದ್ಧದಲ್ಲಿ ಹೋರಾಡುತ್ತಾ ಮೃತಪಟ್ಟ ವರ್ಷ ಯಾವುದು?
— 1799
🔰 ‘ಮೈಸೂರು ಸಂಸ್ಥಾನ’ವನ್ನು ‘ಕರ್ನಾಟಕ’ ಎಂದು ಮರುನಾಮಕರಣ ಮಾಡಲ್ಪಟ್ಟ ವರ್ಷ ಯಾವುದು?
— 1973
🔰‘ಗೋಲ್ಡನ್ ಚಾರಿಯೇಟ್’ ಎಂದು ____ ನ್ನು ಹೆಸರಿಸಲಾಗಿದೆ.
— ರೈಲು*🚩
━━━━━━━━━━━━━━━━━━━━
No comments:
Post a Comment