Sunday, 18 March 2018

ಮಧ್ಯ ಪ್ರದೇಶದಲ್ಲಿ ವಿಶ್ವದ ಮೊತ್ತ ಮೊದಲ ಬಿಳಿ ಹುಲಿ ಸಫಾರಿ*

*ಮಧ್ಯ ಪ್ರದೇಶದಲ್ಲಿ ವಿಶ್ವದ ಮೊತ್ತ ಮೊದಲ ಬಿಳಿ ಹುಲಿ ಸಫಾರಿ*
################
Updated Nov 18, 2017
*ವಿಶ್ವದ ಮೊತ್ತ ಮೊದಲ ವೈಟ್‌ ಟೈಗರ್‌ ಸಫಾರಿ ಮಧ್ಯಪ್ರದೇಶದಲ್ಲಿ ಪ್ರಾರಂಭವಾಗಿದ್ದು ಅಲ್ಲಿಯ ಟೂರಿಸಂಗೆ ಮತ್ತೊಂದು ಗರಿ ಮೂಡಿದಂತಾಗಿದೆ. *
###############
*ಮಧ್ಯ ಪ್ರದೇಶದ ಬಾಂದ್ವಾಗಢ ಮತ್ತು ಕಾನ್ಹಾ ನ್ಯಾಷನಲ್‌ ಪಾರ್ಕ್ ಭಾರತದಲ್ಲಿಯೇ ಪ್ರಸಿದ್ಧ ವೈಲ್ಡ್‌ ಲೈಫ್‌ ಸಫಾರಿ ಸ್ಥಳಗಳಾಗಿವೆ. ಇದೀಗ ರೇವಾದ ಬಳಿ ಇರುವ ಮುಕುಂದ್‌ಪುರ್‌ ಅರಣ್ಯದಲ್ಲಿ ವೈಟ್‌ ಟೈಗರ್‌ ಸಫಾರಿ ಪ್ರಾರಂಭಿಸಿ ವಿಶ್ವದ ಗಮನ ಸೆಳೆದಿದೆ.*
##############
*ರೇವಾ ನಗರದಿಂದ 14 ಕಿ. ಮೀ ದೂರದಲ್ಲಿರುವ ಮುಕುಂದ್‌ಪುರ್‌ ಅರಣ್ಯ ಬಿಳಿ ಹುಲಿಗಳ ಬೀಡಾಗಿದೆ. ಭಾರತದಲ್ಲಿ ಈ ಸ್ಥಳದಲ್ಲಿ ಮಾತ್ರ ಬಿಳಿ ಹುಲಿಗಳು ಕಾಣ ಸಿಗುತ್ತವೆ. ಈ ಕಾಡಿನಲ್ಲಿ ಮೊತ್ತ ಮೊದಲಿಗೆ 1951ರಲ್ಲಿ ಮಹಾರಾಜ ಮಾರ್ಥಂಡ್‌ ಸಿಂಗ್ ಬಿಳಿ ಹುಲಿಯನ್ನು ನೋಡಿದರು.*
##########
*ಹೋಗುವುದು ಹೇಗೆ? *
   ============
*ವಿಮಾನ ಪ್ರಯಾಣ: ಖುಜರಾಹೋ ಏರ್‌ಪೋರ್ಟ್‌ನಲ್ಲಿ ಇಳಿದು ಕ್ಯಾಬ್‌ನಲ್ಲಿ ಈ ಸ್ಥಳಕ್ಕೆ ಹೋಗಬಹುದು. ಏರ್‌ಪೋರ್ಟ್‌ನಿಂದ ಈ ಸಫಾರಿ ಸ್ಥಳಕ್ಕೆ 164 ಕಿ.ಮೀ ದೂರವಿದೆ. *
#########
*ರೈಲು: ರೇವಾ ರೈಲ್ವೆ ಸ್ಟೇಷನ್‌ನಿಂದ ಮುಕುಂದ್‌ಪುರ್‌ ಅರಣ್ಯ 10 ಕಿ.ಮೀ ದೂರದಲ್ಲಿದೆ. ಸ್ಥಳೀಯ ಬಸ್‌ ಅಥವಾ ಕ್ಯಾಬ್‌ನಲ್ಲಿ ಸಫಾರಿ ಸ್ಥಳಕ್ಕೆ ಬರಬಹುದು.*

No comments:

Post a Comment