Thursday, 8 March 2018

ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ* *ಸರ್ಕಾರಕ್ಕೆ ಪ್ರಶಸ

*ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ* *ಸರ್ಕಾರಕ್ಕೆ ಪ್ರಶಸ್ತಿ: ಇದು ಸಿದ್ದು ಸರ್ಕಾರಕ್ಕೆ ಮತ್ತು ಕನ್ನಡಿಗರಿಗೆ ಹೆಮ್ಮೆಯ ವಿಚಾರ*.

ಮಹಿಳಾ ಅರ್ಥಿಕ ಅಭಿವೃದ್ಧಿ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಮೋಸ್ಟ್ ಸಪೋರ್ಟಿವ್ ಗವರ್ನಮೆಂಟ್ ಪ್ರಶಸ್ತಿ ಲಭಿಸಿದೆ. ಮಹಿಳಾ ಅರ್ಥಿಕ ಅಭಿವೃದ್ಧಿಯಲ್ಲಿ ಆಗಿರುವ ಸಾಧನೆಯನ್ನು ಗುರುತಿಸಿ ವಿ ಕನೆಕ್ಟ್ ಇಂಟರ್ನ್ಯಾಷನಲ್ ಸಂಸ್ಥೆ ಪ್ರಶಸ್ತಿಯನ್ನು ಘೋಷಿಸಿದೆ.
ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್ 30ರಂದು ವಾಷಿಂಗ್ಟನ್ ಡಿಸಿಯಲ್ಲಿ ನಡೆಯಲಿದ್ದು, ಮುಖ್ಯಮಂತ್ರಿಗಳ ಪರವಾಗಿ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ವಿಶೇಷವೆಂದ್ರೆ ವಿಶ್ವದಲ್ಲಿಯೇ ಮೊದಲ ಬಾರಿಗೆ ಈ ಪ್ರಶಸ್ತಿಯನ್ನು ಸರ್ಕಾರವೊಂದಕ್ಕೆ ನೀಡಲಾಗುತ್ತಿದೆ. ಈ ಪ್ರಶಸ್ತಿಯು ಅನನ್ಯ ಮತ್ತು ವಿಶೇಷವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸರ್ಕಾರಕ್ಕೆ ಮಾನ್ಯತೆ ತಂದಿದೆ. ಈ ಪ್ರಶಸ್ತಿ ಮಹಿಳಾ ಆರ್ಥಿಕ ಸಬಲೀಕರಣ ಮತ್ತು ಮಹಿಳಾ ಉದ್ಯಮ ಕ್ಷೇತ್ರವನ್ನು ಬಲಿಷ್ಠಗೊಳಿಸಲು ಸರ್ಕಾರಕ್ಕೆ ಸಹಕಾರಿಯಾಗುತ್ತದೆ.
ವಿ ಕನೆಕ್ಟ್ ಇಂಟರ್ನ್ಯಾಷನಲ್ ಸಂಸ್ಥೆಯು ಸಂಯುಕ್ತ ಸಂಸ್ಥಾನದ ಹೊರಗಿರುವ ಮಹಿಳಾ ವಾಣಿಜ್ಯ ಉದ್ಯಮಿಗಳ ಸಂಸ್ಥೆಗಳನ್ನು ಗುರುತಿಸಿ ಶಿಕ್ಷಣ ಮತ್ತು ನೊಂದಣಿಯೊಂದಿಗೆ ಬಹುರಾಷ್ಟ್ರೀಯ ವಾಣಿಜ್ಯ ಕಾರ್ಪೋರೇಟ್ ಖರೀದಿದಾರರನ್ನು ಸಂಪರ್ಕಿಸುವ ಕಾರ್ಯ ಮಾಡುತ್ತಿರುವ ವಿಶ್ವದ ಅತಿ ದೊಡ್ಡ ಸಂಸ್ಥೆಯಾಗಿದೆ.
ಕರ್ನಾಟಕ ಸರ್ಕಾರವು ಮಹಿಳಾ ಉದ್ಯಮವನ್ನು ಇತರೆ ಉದ್ಯಮಗಳೊಂದಿಗೆ ಸಮನಾಗಿ ಅಭಿವೃದ್ಧಿ ಹೊಂದಲು ಹೆಚ್ಚಿನ ಮಹತ್ವವನ್ನು ನೀಡಿರುವ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಪಾತ್ರ ಅತಿ ಪ್ರಾಮುಖ್ಯವಾಗಿದೆಯೆಂದು ವಿ ಕನೆಕ್ಟ್ ಇಂಟರ್ನ್ಯಾಷನಲ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಸಹ ಸಂಸ್ಥಾಪಕರಾದ ಮಿಸಸ್. ಎಲಿಜಬೆತ್ ಎ. ವಾಜ್ಕ್ವಿಸ್ ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರವು ಹೊಸ ಕೈಗಾರಿಕಾ ನೀತಿ 2014-19ನ್ನು 2014ರ ಆಕ್ಟೋಬರ್ 14ರಂದು ಅನಾವರಣಗೊಳಿಸಿ, ಮಹಿಳಾ ಉದ್ಯಮಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ಮೊದಲ ಬಾರಿಗೆ ನೀಡಿತು. ಮಹಿಳಾ ಉದ್ದಿಮೆದಾರರಿಗೆ ತಮ್ಮ ಉದ್ದಿಮೆಗಳನ್ನು ಪ್ರಾರಂಭಿಸಲು ವಿಶೇಷ ಗಮನ ಹರಿಸಲಾಯಿತು. ಮಹಿಳಾ ಉದ್ಯಮಿಗಳ ಸುಸ್ಥಿರ ಅಭಿವೃದ್ಧಿಗಾಗಿ ಕೈಗಾರಿಕಾ ಸಾಮರ್ಥ್ಯ ಮತ್ತು ಸಬಲೀಕರಣ ಕ್ರಮಗಳನ್ನು ಕೈಗೊಳ್ಳಲಾಯಿತು. ಈ ಕೆಳಕಂಡ ಪ್ರೋತ್ಸಾಹ ಮತ್ತು ವಿನಾಯ್ತಿಗಳನ್ನು ಮಹಿಳಾ ಉದ್ದಿಮೆದಾರರಿಗೆ ನೀಡಲಾಯಿತು.
• ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ/ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಯಮಿತ ಅಭಿವೃದ್ಧಿಪಡಿಸಿರುವ ಕೈಗಾರಿಕಾ ನಿವೇಶನ/ಷಡ್ಗಳ ಹಂಚಿಕೆಯಲ್ಲಿ ಮಹಿಳಾ ಉದ್ಯಮಿಗಳಿಗೆ ಶೇ. 5% ಮೀಸಲಾತಿ.
• ಮಹಿಳಾ ಉದ್ಯಮಿಗಳಿಗೆ ವಿಶೇಷ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮಗಳು.
• ಮಹಿಳಾ ಉದ್ಯಮಿಗಳು ಅಭಿವೃದ್ಧಿಪಡಿಸುವ ಎಂಎಸ್ಎಂಇ ಶೇ.75% ಸ್ಟಾಂಪ್ ಡ್ಯೂಟಿಯಲ್ಲಿ ವಿನಾಯ್ತಿ ಮತ್ತು ಶೇ.75% ಭೂ-ಪರಿವರ್ತನಾ ವೆಚ್ಚ ಮರುಪಾವತಿ ಮತ್ತು ಇಟಿಪಿ ಸ್ಥಾಪನೆಗೆ ಒಂದು ಬಾರಿ ಶೇ.75% ಬಂಡವಾಳ ರಿಯಾರ್ತಿ (ಬೆಂಗಳೂರಿಗೆ 50 ಲಕ್ಷ ಗರಿಷ್ಠ ಮಿತಿ).
• ಮಹಿಳಾ ಮಾಲೀಕತ್ವದ ಉದ್ಯಮಿಗಳಿಗೆ ವಿ ಕನೆಕ್ಟ್ ಪ್ರಮಾಣೀಕರಣದ ವೆಚ್ಚದ ಮರುಪಾವತಿ 3 ವರ್ಷಗಳವರೆಗೆ ಗರಿಷ್ಠ ಮಿತಿ 75,000 ರೂ.
• ಮೊದಲನೆಯ ಮಹಿಳಾ ಪಾರ್ಕ್ ಬೆಂಗಳೂರಿನ ಸಮೀಪ ಹಾರೊಹಳ್ಳಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ರಾಜ್ಯದೆಲ್ಲಡೆಯಿಂದ ಬಂದ ಉತ್ತಮ ಪ್ರತಿಕ್ರಿಯೆಯಿಂದ ಮೈಸೂರು, ಧಾರವಾಡ, ಬೆಳಗಾವಿ, ಬಳ್ಳಾರಿ, ಮತ್ತು ಕಲಬುರಗಿಯಲ್ಲಿ ಮಹಿಳೆಯರ ಪಾರ್ಕ್ ಸ್ಥಾಪಿಸುವ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.
ಮಹಿಳಾ ಉದ್ದಿಮೆದಾರರಿಗೆ ವಿಶೇಷವಾದ ಸೌಕರ್ಯಗಳನ್ನು ಕಲ್ಪಿಸುವ ದೃಷ್ಠಿಯಿಂದ ಮುಖ್ಯಮಂತ್ರಿಯವರು ಹಾಗೂ ಬೃಹತ್ ಕೈಗಾರಿಕಾ ಸಚಿವರಾದ ಆರ್.ವಿ. ದೇಶಪಾಂಡೆ ಅಧ್ಯಕ್ಷತೆಯಲ್ಲಿ ಇನ್ವೆಸ್ಟ್ ಕರ್ನಾಟಕ, ಥಿಂಕ್ಬಿಗ್, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಅಂತರಾಷ್ಟ್ರೀಯ ಉದ್ಯಮಿಗಳ ದಿನಾಚರಣೆ ಕಾರ್ಯಕ್ರಮಗಳನ್ನು ವರ್ಷವಿಡಿ ಆಯೋಜಿಸಲಾಗಿದೆ.

No comments:

Post a Comment