ಮಾರ್ಚ್ 8ರ 'ವಿಶ್ವ ಮಹಿಳಾ ದಿನಾಚರಣೆ' ಪ್ರಯುಕ್ತ ಮಹಿಳೆಯರಿಗಾಗಿಯೇ ಏರ್ಪಡಿಸಲಾದ ಕ್ವಿಜ್'ಗೆ ಕೊಟ್ಟಿದ್ಧ 35 ಪ್ರಶ್ನೆಗಳ ಉತ್ತರ ಸಂಕೇತಗಳು..
1. ಭಾರತದ ಅತ್ಯುನ್ನತ 'ಜ್ಞಾನಪೀಠ ಪ್ರಶಸ್ತಿ'ಯನ್ನು ಈವರೆಗೆ ಎಷ್ಟು ಜನ ಮಹಿಳೆಯರು ಪಡೆದಿದ್ದಾರೆ?
A. 5
B. 6
C. 7●
D. 8
2. ಅನಾ ಅಹ್ಮತೋವಾ ರಷ್ಯದ ಹೆಸರಾಂತ ಕವಯಿತ್ರಿ. ಆಕೆಯ ಹೆಸರನ್ನು ಕೆಳಕಂಡ ಯಾವುದಕ್ಕೆ ಇಡಲಾಗಿದೆ?
A. ಒಂದು ನೌಕೆಗೆ
B. ಒಂದು ಗ್ರಹಕ್ಕೆ●
C. ಒಂದು ಅಣುಸ್ಥಾವರಕ್ಕೆ
D. ಒಂದು ವಿಮಾನ ನಿಲ್ದಾಣಕ್ಕೆ
3. ಭಾರತದಲ್ಲಿ ಪ್ರಥಮ ಬಾರಿಗೆ ಮಹಿಳೆಯರಲ್ಲಿ ಯಾವ ಭಾಷೆಯ ಲೇಖಕಿ ಜ್ಞಾನಪೀಠ ಪ್ರಶಸ್ತಿ ಪಡೆದುಕೊಂಡರು?
A. ಒಡಿಯಾ
B. ಹಿಂದಿ
C. ಬಂಗಾಳಿ●
D. ಅಸ್ಸಾಮಿ
4. ದೊಂಡೊ ಕೇಶವ ಕಾರ್ವೆಯವರು ಶ್ರೀಮತಿ ನಾತಿಬಾಯಿ ದಾಮೋದರ್ ಠಾಕರೆ (SNDT) ಹೆಸರಿನಲ್ಲಿ ಯಾವ ವರ್ಷ ಪ್ರಥಮ ಮಹಿಳಾ ವಿ. ವಿ. ಯನ್ನು ಆರಂಭಿಸಿದ್ದರು?
A. 1910
B. 1914
C. 1916●
D. 1918
5. ದೇಶದ ಮೊದಲ ಮಹಿಳಾ ಸಚಿವೆಯಾದ ಖ್ಯಾತಿ ಯಾರಿಗೆ ಸಲ್ಲುತ್ತದೆ?
A. ಸರೋಜಿನಿ ನಾಯ್ಡು
B. ಸುಚೇತಾ ಕೃಪಲಾನಿ
C. ಆನಿ ಬೆಸೆಂಟ್
D. ರಾಜಕುಮಾರಿ ಅಮೃತ್'ಕೌರ್●
6. ದೇಶದ ಮೊದಲ ಮಹಿಳಾ ಮುಖ್ಯ ಮಂತ್ರಿಯಾದ ಖ್ಯಾತಿ ಸುಚೇತಾ ಕೃಪಲಾನಿ ಅವರಿಗೆ ಸಲ್ಲುತ್ತದೆ. ಅಂದಹಾಗೆ ಅವರು ಯಾವ ರಾಜ್ಯದ ಮುಖ್ಯಮಂತ್ರಿ ಆಗಿದ್ದರು?
A. ಮಧ್ಯಪ್ರದೇಶ
B. ಉತ್ತರಪ್ರದೇಶ●
C. ಬಿಹಾರ
D. ಹಿಮಾಚಲ ಪ್ರದೇಶ
7. ಮೀನಾಕ್ಷಿ ಮದನ್ ರೈ ಅವರು ಯಾವ ಹೈಕೋರ್ಟಿನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ?
A. ಸಿಕ್ಕಿಂ ಹೈಕೋರ್ಟ್●
B. ಪಟ್ನಾ ಹೈಕೋರ್ಟ
C. ದೆಹಲಿ ಹೈಕೋರ್ಟ್
D. ಕೋಲ್ಕತಾ ಹೈಕೋರ್ಟ್
8. ಸಂಚಿ ಹೊನ್ನಮ್ಮ 'ಹದಿಬದೆಯ ಧರ್ಮ' ಎಂಬ ಕಾವ್ಯವನ್ನು ರಚಿಸಿದ್ದು ಕೆಳಕಂಡ ಯಾರ ಅವಧಿಯಲ್ಲಿ?
A. ಚಾಮರಾಜೇಂದ್ರ ಒಡೆಯರ್
B. ಚಿಕ್ಕ ದೇವರಾಜ ಒಡೆಯರ್●
C. ಕೃಷ್ಣರಾಜ ಒಡೆಯರ್
D. ಕಂಠೀರವ ನರಸಿಂಹರಾಜ್ ಒಡೆಯರ್
9. 'ಮಿಸೆಸ್ ಬಿ.ಡಿ.ಜಿ ಕೃಷ್ಣ' ಹೆಸರಿನಲ್ಲಿ ಅರಂಭದಲ್ಲಿ ಸಾಹಿತ್ಯ ರಚನೆ ಮಾಡಿದವರು ಯಾರು?
A. ತಿರುಮಲಾಂಬ
B. ಕೊಡಗಿನ ಗೌರಮ್ಮ●
C. ತ್ರಿವೇಣಿ
D. ಎಂ. ಕೆ. ಇಂದಿರಾ
10. 'ಮೈಲಾರಯ್ಯ - ಸರಸು' ಈ ಎರಡು ಯಾರ ಕಲ್ಪನೆಯ ಹೆಸರಾಂತ ಪಾತ್ರಗಳು?
A. ತ್ರಿವೇಣಿ
B. ಅನುಪಮಾ ನಿರಂಜನ
C. ಟಿ. ಸುನಂದಮ್ಮ●
D. ಡಾ. ಕಮಲಾ ಹಂಪನಾ
11. 'ಒಡಲಾಳ'ದ 'ಸಾಕವ್ವ'ನ ಪಾತ್ರಕ್ಕೆ ಜೀವ ತುಂಬಿದವರು ಯಾರು?
A. ಜಿ. ಜಯಶ್ರೀ
B. ಉಮಾಶ್ರೀ●
C. ಸುಂದರಶ್ರೀ
D. ಜಯಂತಿ
12. ಬೆಂಗಳೂರಿನ 'ಮಕ್ಕಳ ಕೂಟ' ದ ಸ್ಥಾಪನೆಗೆ ಕಾರಣರಾದವರು ಯಾರು?
A. ತಿರುಮಲೆ ರಾಜಮ್ಮ
B. ಆರ್. ಕಲ್ಯಾಣಮ್ಮ●
C. ಟಿ. ಸುನಂದಮ್ಮ
D. ಕೊಡಗಿನ ಗೌರಮ್ಮ
13. ಕೆಳಕಂಡ ಯಾವ ಮೂಲ ಹೆಸರಿನ ಲೇಖಕಿ 'ತ್ರಿವೇಣಿ' ಎಂಬ ಹೆಸರು ಇಟ್ಟುಕೊಂಡು ಪ್ರಖ್ಯಾತರಾದರು?
A. ಶೋಭನಾ
B. ಸುಮಲತಾ
C. ಅನಸೂಯ●
D. ಅನುರಾಧ
14. ಈ ಕೆಳಕಂಡವುಗಳಲ್ಲಿ ಎಂ.ಕೆ. ಇಂದಿರಾ ಅವರ ಮೊದಲ ಕಾದಂಬರಿ ಯಾವುದು?
A. ಗಜ್ಜೆ ಪೂಜೆ
B. ತುಂಗಭದ್ರ●
C. ಫಣಿಯಮ್ಮ
D. ಸದಾನಂದ
15. 'ಹಸಿಮಾಂಸ ಮತ್ತು ಹದ್ದುಗಳು' ಇದು ಯಾರ ಹೆಸರಾಂತ ಕಾದಂಬರಿಯಾಗಿದೆ?
A. ಬಿ.ಟಿ. ಲಲಿತಾ ನಾಯಕ್
B. ಬಿ.ಟಿ. ಜಾಹ್ನವಿ
C. ಸರಸ್ವತಿ ಚಿಮ್ಮಲಗಿ
D. ಗೀತಾ ನಾಗಭೂಷಣ●
16. 'ಚಂದ್ರಗರಿಯ ತೀರದಲ್ಲಿ' ಇದು ಯಾರ ಪ್ರಸಿದ್ಧ ಕಾದಂಬರಿಯಾಗಿದೆ?
A. ವೈದೇಹಿ
B. ಬಾನು ಮುಷ್ತಾಕ್
C. ಸಾರಾ ಅಬೂಬಕರ್●
D. ಎಚ್.ಜಿ. ರಾಧಾದಾವಿ
17. 'ಭಾರತಿ' ಎಂಬ ಹೆಸರಿನಿಂದ ಕಾವ್ಯ, ನಾಟಕ, ವ್ಯಕ್ತಿಚಿತ್ರ ಬಲೆದವರು ಯಾರು?
A. ಬಿ.ಟಿ. ಲಲಿತಾ ನಾಯಕ
B. ತಿರುಮಲೆ ರಾಜಮ್ಮ●
C. ಟಿ. ಸುನಂದಮ್ಮ
D. ಕೊಡಗಿನ ಗೌರಮ್ಮ
18. ಈ ಕೆಳಕಂಡವುಗಳಲ್ಲಿ ಅನುಪಮಾ ನಿರಂಜನ ಅವರ ಕೊನೆಯ ಕಾದಂಬರಿ ಯಾವುದು?
A. ನಟಿ
B. ಮಾಧವಿ
C. ಋಣಮುಕ್ತಳು
D. ಮೂಲಮುಖಿ●
19. 2011ರ ಜನಸಂಖ್ಯೆ ಪ್ರಕಾರ ಕರ್ನಾಟಕದಲ್ಲಿ ಲಿಂಗಾನುಪಾತ ಎಷ್ಟಿದೆ?
A. 1,000ಕ್ಕೆ 923
B. 1,000ಕ್ಕೆ 963
C. 1,000ಕ್ಕೆ 973●
D. 1,000ಕ್ಕೆ 983
20. 2011ರ ಜನಸಂಖ್ಯೆ ಪ್ರಕಾರ, ಗರಿಷ್ಟ 1094 ಹಾಗೂ ಅತಿ ಕನಿಷ್ಟ 916 ಲಿಂಗಾನುಪಾತ ಹೊಂದಿದ ಎರಡು ಜಿಲ್ಲೆಗಳು ಯಾವುವು?
A. ಉಡುಪಿ - ಹಾವೇರಿ
B. ಉಡುಪಿ - ಬೆಂ.ನಗರ ಜಿಲ್ಲೆ●
C. ಬೆಂಗಳೂರು ಗ್ರಾಮಾಂತರ - ಹಾವೇರಿ
D. ಬೆಂ.ನಗರ - ಉಡುಪಿ
21. 2011ರ ಜನಗಣತಿಯ ಪ್ರಕಾರ, ಕರ್ನಾಟಕದಲ್ಲಿ ಪುರುಷ ಸಾಕ್ಷರತೆ ಪ್ರಮಾಣ 82.47% ಇದ್ದರೆ, ಮಹಿಳಾ ಸಾಕ್ಷರತೆ ಪ್ರಮಾಣ ಎಷ್ಟಿದೆ?
A. 72.88%
B. 68.08%●
C. 66.88%
D. 64.08%
22. 'ಶಾಂತಲಾ' ಇದು ಯಾರ ಹೆಸರಾಂತ ಕಾದಂಬರಿಯಾಗಿದೆ?
A. ಜಿ.ವಿ. ಅಯ್ಯರ್
B. ಕೆ.ವಿ. ಅಯ್ಯರ್●
C. ಭಾರತಿಸುತ
D. ದೇವುಡು
23. ನ್ಯಾಯಾಲಯದ ಆದೇಶದ ಪ್ರಕಾರ, ಮಹಿಳಾ ಮೀಸಲಾತಿ ಶೇ.50ನ್ನು ಮೀರುವಂತಿಲ್ಲ. ಆದರೆ ಮಹಿಳೆಯರಿಗೆ ಶೇ. 68ರಷ್ಟು ಮೀಸಲಾತಿ ನೀಡಿದ ರಾಜ್ಯ ಯಾವುದು?
A. ಗುಜರಾತ್
B. ಮಧ್ಯಪ್ರದೇಶ
C. ರಾಜಸ್ಥಾನ●
D. ಬಿಹಾರ
24. ಕೆ.ಎಸ್. ನಾಗರತ್ನಮ್ಮ ಇವರು ಈ ಹಿಂದೆ ಯಾವ ಪ್ರಮುಖ ಹುದ್ದೆಯನ್ನು ಅಲಂಕರಿಸಿದ್ದರು?
A. ಅಡ್ವೋಕೇಟ್ ಜನರಲ್
B. ಮುಖ್ಯ ನ್ಯಾಯಮೂರ್ತಿ
C. ರಾಜ್ಯಪಾಲ
D. ಸಭಾಪತಿ●
25. ನಾಟ್ಯರಾಣಿ ಶಾಂತಲೆ ಕೆಳಕಂಡ ಯಾವ ಪ್ರಸಿದ್ಧ ಪ್ರವಾಸಿ ತಾಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು?
A. ಮಧುಗಿರಿ
B. ಶಿವಗಂಗೆ●
C. ನಂದಿಬೆಟ್ಟ
D. ಹಿಮವದ್ ಗೋಪಾಲಸ್ವಾಮಿ ಬೆಟ್ಟ
26. ಗಂಗೂಬಾಯಿ ಹಾನಗಲ್ ಅವರ ಹೆಸರಿನಲ್ಲಿ ಕೆಳಕಂಡ ಯಾವ ನಗರದಲ್ಲಿ ಸಂಗೀತ ವಿ.ವಿ. ಸ್ಥಾಪನೆ ಮಾಡಲಾಗಿದೆ?
A. ಧಾರವಾಡ
B. ವಿಜಯಪುರ
C. ಮೈಸೂರು●
D. ಬೆಳಗಾವಿ
27. ಅಕ್ಕಮಹಾದೇವಿಯ ಹುಟ್ಟೂರು ಉಡುತಡಿ ಕೆಳಕಂಡ ಯಾವ ತಾಲೂಕಿನಲ್ಲಿದೆ?
A. ಶಿಕಾರಿಪುರ●
B. ಶಿವಮೊಗ್ಗ
C. ಸಾಗರ
D. ಹೊಸನಗರ
28. 'ಭೂಮಿಗಾಥೆ' ಹೆಸರಿನಲ್ಲಿ 'ಜೀವನಾಡಿ' ಆರೋಗ್ಯ ಮಾಸಿಕದಲ್ಲಿ ಅಂಕಣ ಬರೆದವರು ಯಾರು?
A. ಡಾ. ಲೀಲಾವತಿ ದೇವದಾಸ್
B. ಡಾ. ಗಿರಿಜಮ್ಮ
C. ಡಾ. ವಸುಂಧರಾ ಭೂಪತಿ●
D. ಡಾ. ಅನುಪಮಾ ನಿರಂಜನ
29. ಕೆಳಕಂಡವು ನಾಲ್ಕೂ ಚಲನಚಿತ್ರಗಳಾದ ಕಾದಂಬರಿಗಳು. ಮೂರು ಒಬ್ಬರದ್ದೇ ಆಗಿದ್ದರೆ, ಒಂದು ಬೇರೆಯವರದ್ದಾಗಿದೆ. ಅದು ಯಾವುದು?
A. ಹಣ್ಣೆಲೆ ಚಿಗುರಿದಾಗ
B. ಬೆಳ್ಳಿಮೋಡ
C. ಫಣಿಯಮ್ಮ●
D. ಶರಪಂಜರ
30. 'ಹಬ್ಬ ಮತ್ತು ಬಲಿ' ಇದು ಯಾರ ಹೆಸರಾಂತ ಕಾದಂಬರಿ?
A. ಗೀತಾ ನಾಗಭೂಷಣ
B. ಸವಿತಾ ನಾಗಭೂಷಣ
C. ಮಾಲತಿ ಪಟ್ಟಣಶೆಟ್ಟಿ
D. ಬಿ.ಟಿ. ಲಲಿತಾ ನಾಯಕ್●
31. ಇನ್ಫೋಸಿಸ್ ಸಂಸ್ಥೆಯನ್ನು ತಮ್ಮ ಪತಿಯೊಂದಿಗೆ ಕಟ್ಟಿ ಬೆಳೆಸಿದ ಸುಧಾ ಮೂರ್ತಿ ಅದಕ್ಕೂ ಮುಂಚೆ ಕೆಳಕಂಡ ಯಾವ ಕಂಪನಿಯಲ್ಲಿ ಡೆವಲಪ್'ಮೆಂಟ್ ಎಂಜಿನಿಯರ್ ಆಗಿ ಕೆಲಸ ಮಾಡಿದ್ದರು?
A. ಬಜಾಜ್
B. ಟಾಟಾ- ಟೆಲ್ಕೊ ●
C. ರಿಲಯನ್ಸ್
D. ವಿಪ್ರೋ
32. 'ಅನುರಾಗ ಅರಳಿತು', 'ಸುವರ್ಣ ಸೇತುವೆ' ಸಿನಿಮಾ ಆದ ಈ ಕೃತಿಗಳನ್ನು ರಚಿಸಿದವರು ಯಾರು?
A. ಎಂ. ಕೆ. ಇಂದಿರಾ
B. ಮಂಗಳಾ ಸತ್ಯನ್
C. ಎಚ್.ಜಿ. ರಾಧಾದೇವಿ●
D. ತ್ರಿವೇಣಿ
33. "ಜಗವನಾಳುವ ತಾಯಿ ನನ್ನನಾಳುವ ಮಾಯೆ
ತಾನಾಗಿ ಬಂದಿಹಳು ನನ್ನ ಜಾಯೆ"
ಈ ಮೇಲ್ಕಂಡ ಸಾಲುಗಳು ಯಾರ ಕವಿತೆಯಲ್ಲಿ ಗೋಚರಿಸುತ್ತವೆ?
A. ಅಂಬಿಕಾತನಯ ದತ್ತ
B. ತೀನಂಶ್ರೀ
C. ಜಿಎಸ್ಸೆಸ್
D. ಕುವೆಂಪು●
34. "ನನ್ನವಳು ನನ್ನೆದೆಯ ಹೊನ್ನಾಡನಾಳುವಳು
ಬೆಳಗುಗೆನ್ನೆಯ ಚೆನ್ನೆ ನನ್ನ ಮಡದಿ"
ಈ ಪ್ರೀತಿಯ ಸಾಲುಗಳನ್ನು ಬರೆದವರು ಯಾರು?
A. ಬರಗೂರು ರಾಮಚಂದ್ರಪ್ಪ
B. ಕೆ.ಎಸ್ ನ●
C. ಡಾ. ಚಂದ್ರಶೇಖರ ಪಾಟೀಲ
D. ದೊಡ್ಡರಂಗೇಗೌಡ
35. ಕರ್ನಾಟಕದ ಏಕೈಕ ಮಹಿಳಾ ವಿ.ವಿ. ಕೆಳಕಂಡ ಯಾವ ವರ್ಷ ಅಸ್ತಿತ್ವಕ್ಕೆ ಬಂದಿತು?
A. 2001
B. 2003●
C. 2005
D. 2007
ಮೇಲ್ಕಂಡ 35 ಪ್ರಶ್ನೆಗಳು ನಿಮಗೆ ಉಪಯುಕ್ತ ಎನಿಸಿದ್ದಲ್ಲಿ ಈ ಪೋಸ್ಟ್'ನ್ನು ಅವಶ್ಯವಾಗಿ Share ಮಾಡಿ.
No comments:
Post a Comment