Saturday, 3 March 2018

ವಿಶ್ವದ ಉನ್ನತ 400 ವಿವಿಗಳ ಪಟ್ಟಿಯಲ್ಲಿ ಭಾರತದ ಕೇವಲ 6 ವಿವಿಗಳು*

*ವಿಶ್ವದ ಉನ್ನತ 400 ವಿವಿಗಳ ಪಟ್ಟಿಯಲ್ಲಿ ಭಾರತದ ಕೇವಲ 6 ವಿವಿಗಳು*

Friday, 02 Mar,
03/02/2018
*Shivu Yadawad*

*ಹೊಸದಿಲ್ಲಿ : 2018ರ ಕ್ಯೂ ಎಸ್ ವರ್ಲ್ಡ್ ಯುನಿವರ್ಸಿಟೀಸ್ ರ್ಯಾಂಕಿಂಗ್ ಪ್ರಕಾರ 400 ಉನ್ನತ ವಿಶ್ವವಿದ್ಯಾಲಯಗಳ ಪೈಕಿ ಭಾರತದ ಕೇವಲ ಆರು ವಿಶ್ವವಿದ್ಯಾಲಯಗಳು ಸ್ಥಾನ ಪಡೆದಿವೆ.*

*ಈ ಆರರಲ್ಲಿ ಐದು ವಿವಿಗಳು ಐಐಟಿ ಗಳಾಗಿವೆ. ಐಐಟಿ ಯೇತರವಾಗಿರುವ ಒಂದು ವಿಶ್ವವಿದ್ಯಾಲಯವು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸಯನ್ಸ್ (ಐಐಎಸ್ಸಿ) ಆಗಿದೆ.*

*ಪಟ್ಟಿಯಲ್ಲಿ 172ನೇ ಸ್ಥಾನಿಯಾಗಿರುವ ಐಐಟಿ ದಿಲ್ಲಿ, ಆರು ಭಾರತೀಯ ವಿವಿಗಳ ಪೈಕಿ ಮೊದಲ ಸ್ಥಾನದಲ್ಲಿದೆ. ಕಳೆದ ವರ್ಷ ಐಐಟಿ ದಿಲ್ಲಿ ಈ ಪಟ್ಟಿಯಲ್ಲಿ 185ನೇ ಸ್ಥಾನದಲ್ಲಿತ್ತು. ಈ ಬಾರಿ ಅದು 172ನೇ ಸ್ಥಾನಕೆ ಜಿಗಿಯುವ ಮೂಲಕ ಉತ್ತಮ ಪ್ರಗತಿಯನ್ನು ದಾಖಲಿಸಿದೆ.*

ಐಐಟಿ ದಿಲ್ಲಿ (172) ಬಳಿಕದ ಸ್ಥಾನದಲ್ಲಿರುವ ಉಳಿದ ಐದು ಭಾರತೀಯಗಳೆಂದರೆ

ಐಐಟಿ ಬಾಂಬೆ (179),

ಐಐಎಸ್ಸಿ ಬೆಂಗಳೂರು (190),

ಐಐಟಿ ಮದ್ರಾಸ್ (264),

ಐಐಟಿ ಕಾನ್ಪುರ (293)

ಐಐಟಿ ಖರಗ್ಪುರ (308).

No comments:

Post a Comment