Tuesday, 6 February 2018

GK science

*Geography General Keywords*

         _*ಆಮ್ಲಗಳು*_

_*🔵ಆಮ್ಲಗಳು ಮತ್ತು ಪ್ರತ್ಯಾಮ್ಲಗಳು*_

ವಿವಿಧ ಪರಮಾಣುಗಳಿಂದ ಮಾಡಲ್ಪಟ್ಟಿರುವ ವಸ್ತುವಿಗೆ ಸಂಯುಕ್ತ ಎನ್ನುವರು. ಸಂಯುಕ್ತವು ಎರಡು ಅಥವಾ ಹೆಚ್ಚು ಧಾತುಗಳ ಸಂಯೋಗದಿಂದ ಉಂಟಾಗುತ್ತದೆ.  ಅಥವಾ ಎರಡು ಅಥವಾ ಹೆಚ್ಚು ಧಾತುಗಳು ನಿರ್ದಿಷ್ಟ ಅನುಪಾತದಲ್ಲಿ ರಾಸಾಯನಿಕವಾಗಿ ಸಂಯೋಗಗೊಂಡು ಸಂಯುಕ್ತ ಉಂಟಾಗುತ್ತದೆ. ಸಂಯುಕ್ತಗಳು ಘನ, ದ್ರವ, ಅನಿಲಗಳಾಗಿರಬಹುದು.

*🌏ಉದಾ:*

# ಹೈಡ್ರೋಜನ್ ಮತ್ತು ಆಕ್ಸಿಜನ್ ನಿರ್ದಿಷ್ಟ ಅನುಪಾತದಲ್ಲಿ ರಾಸಾಯನಿಕವಾಗಿ ಸಂಯೋಗವಾಗಿ ಉಂಟಾಗುವ ಸಂಯುಕ್ತವೇ ನೀರು.

# ಸೋಡಿಯಮ್ + ಕ್ಲೋರಿನ್ = ಸೋಡಿಯಮ್ ಕ್ಲೋರೈಡ್ ಒಂದು ಸಂಯುಕ್ತ.

# ಹೈಡ್ರೋಜನ್ + ಗಂಧಕ + ಆಕ್ಸಿಜನ್ = ಸಲ್ಫೂರಿಕ್ ಆಮ್ಲ

ರಾಸಾಯನಿಕ ಸಂಯುಕ್ತಗಳನ್ನು ವಿಶಾಲವಾಗಿ ಮೂರು ಗುಂಪುಗಳನ್ನಾಗಿ ಮಾಡಬಹುದು, ಅವುಗಳೆಂದರೆ.

1. ಆಮ್ಲಗಳು

2. ಪ್ರತ್ಯಾಮ್ಲಗಳು

3. ಲವಣಗಳು

_*🔵1. ಆಮ್ಲಗಳು (Acids)*_

# ಆಮ್ಲ ಎಂಬ ಪದವು ಲ್ಯಾಟಿನ್ ಭಾಷೆಯ 'ಆಸಿಡಸ್'  ಎಂಬ ಪದದಿಂದ ಬಂದಿದೆ. ಆಸಿಡಸ್ ಎಂದರೆ ಹುಳಿ  ಎಂದರ್ಥವಿದೆ.

# ಆಮ್ಲ ಎಂದರೆ ಜಲಜನಕದ ಅಯಾನನ್ನು ಇನ್ನೊಂದು ಸಂಯುಕ್ತಕ್ಕೆ ವರ್ಗಾಯಿಸುವ ಒಂದು ಸಂಯುಕ್ತ ವಸ್ತು.

# ಹೆಚ್ಚಿನ ಎಲ್ಲಾ ಆಮ್ಲಗಳು ಹುಳಿ ರುಚಿಯನ್ನು ಹೊಂದಿದ್ದು, ಸಂಪರ್ಕಕ್ಕೆ ಬಂದಲ್ಲಿ ಚರ್ಮವನ್ನು ಸುಡುತ್ತದೆ.

# ಹೆಚ್ಚಿನ ಲೋಹಗಳು ಆಮ್ಲಗಳಲ್ಲಿ ಕರಗುತ್ತದೆ. ನೀಲಿ ಲಿಟ್ಮಸ್‌ನ್ನು ಕೆಂಪಾಗಿಸುತ್ತದೆ. ಕ್ಷಾರಗಳು ಆಮ್ಲಗಳನ್ನು ಸ್ಥಿರಗೊಳಿಸುತ್ತವೆ.

# ಆಮ್ಲದ ಕೆಲವು ಹನಿಗಳನ್ನು ನೀರಿನಲ್ಲಿ ಸೇರಿಸುವುದರಿಂದ ನೀರು ಉತ್ತಮ ವಿದ್ಯುತ್ ವಾಹಕವಾಗುತ್ತದೆ.

# ಆಮ್ಲಗಳು ನೀರಿನಲ್ಲಿ ವಿಲೀನವಾಗುತ್ತವೆ.

# ವಿಟಮಿನ್ ಸಿ ಯನ್ನು ರಾಸಾಯನಿಕವಾಗಿ ಆಸ್ಕೋರ್ಬಿಕ್ ಆಮ್ಲವೆಂದು ಕರೆಯಲಾಗುತ್ತದೆ. ನಿಂಬೆಹಣ್ಣು, ಕಿತ್ತಲೆಹಣ್ಣು, ನೆಲ್ಲಿಕಾಯಿ ಮತ್ತು ದ್ರಾಕ್ಷಿ ಹಣ್ಣಿನಂತಹ ಹಣ್ಣುಗಳು 'ವಿಟಮಿನ್ ಸಿ' ಯ ಆಕರವಾಗಿವೆ.

# ಕೆಂಪು ಇರುವೆ ಮತ್ತು ಜೇನುಹುಳುವಿನಿಂದ ಕಚ್ಚಿಸಿಕೊಂಡಾಗ ಚರ್ಮದ ಮೇಲೆ ಉರಿಯಾಗುತ್ತದೆ ಏಕೆಂದರೆ ಈ ಕೀಟಗಳು ಕಚ್ಚಿದಾಗ ವ್ಯಕ್ತಿಯ ದೇಹದ ಒಳಗೆ ಫಾರ್ಮಿಕ್ ಆಮ್ಲವನ್ನು ಸೇರಿಸುತ್ತವೆ.

# ಆಮ್ಲಗಳು ಕಬ್ಬಿಣ ಮತ್ತು ಅಲ್ಯೂಮಿನಿಯಮ್‍ನಂತಹ ಲೋಹಗಳನ್ನು ಸಂಕ್ಷಾರಣಗೊಳಿಸುವುದರಿಂದ ಆಮ್ಲಗಳನ್ನು ಲೋಹದ ಪಾತ್ರೆಗಳಲ್ಲಿ ಶೇಖರಿಸುವುದಿಲ್ಲ. ಅವುಗಳನ್ನು ಗಾಜಿನ ಪಾತ್ರೆಗಳಲ್ಲಿ ಶೇಖರಿಸುವುದು ಸುರಕ್ಷಿತವಾಗಿರುತ್ತದೆ.

_*🌐ಆಮ್ಲದ ವಿಧಗಳು*_

ಆಮ್ಲಗಳನ್ನು ಜೈವಿಕ ಮತ್ತು ಖನಿಜಯುಕ್ತ ಆಮ್ಲಗಳೆಂದು ವಿಂಗಡಿಸಲಾಗಿದೆ.

_*🌐1. ಜೈವಿಕ ಅಮ್ಲಗಳು (Organic Acids)*_

ನೈಸರ್ಗಿಕವಾಗಿ ಸಿಗುವ ಆಮ್ಲಗಳನ್ನು ಜೈವಿಕ ಆಮ್ಲಗಳೆನ್ನುವರು ಅಥವಾ ಇಂಗಾಲದ ಪರಮಾಣುಗಳನ್ನು ಹೊಂದಿರುವ ಆಮ್ಲಗಳನ್ನು ಜೈವಿಕ ಆಮ್ಲಗಳೆಂದು ಕರೆಯುತ್ತಾರೆ. ಉದಾ; ಸಿಟ್ರಿಕ್ ಆಮ್ಲ, ಟಾರ್ಟಾರಿಕ್ ಆಮ್ಲ, ಇತ್ಯಾದಿ.

_*🌐2. ಅಜೈವಿಕ (inorganic Acids) ಅಥವಾ ಖನಿಜಯುಕ್ತ ಆಮ್ಲಗಳು (Minerals Acids)*_

ಭೂಮಿಯಲ್ಲಿ ಸಿಗುವ ಆಮ್ಲಗಳನ್ನು ಬಳಸಿ ಖನಿಜಯುಕ್ತ ಆಮ್ಲಗಳನ್ನು ತಯಾರಿಸುತ್ತಾರೆ. ಅಥವಾ ಇಂಗಾಲದ ಪರಮಾಣುಗಳನ್ನು ಹೊಂದಿಲ್ಲದ ಅಮ್ಲಗಳನ್ನು ಅಜೈವಿಕ ಅಮ್ಲಗಳೆಂದೂ ಕರೆಯುತ್ತಾರೆ. ಅಜೈವಿಕ ಆಮ್ಲಗಳಿಗೆ ಉದಾಹರಣೆಯೆಂದರೆ, ನೈಟ್ರಿಕ್ ಆಮ್ಲ (HNO3), ಗಂಧಕಾಮ್ಲ (H2SO4), ಹೈಡ್ರೊಕ್ಲೋರಿಕ್ ಆಮ್ಲ (HCI), ಇತ್ಯಾದಿ.

*🌐ಪ್ರಮುಖ ಆಮ್ಲಗಳು*

*💧1) ನೈಟ್ರಿಕ್ ಆಮ್ಲ (HNO2)*

# ತಾಮ್ರ, ಹಿತ್ತಾಳೆ ಅಥವಾ ಕಂಚಿನಂತಹ ಲೋಹಗಳ ಮೇಲೆ ಹೆಸರು ಅಥವಾ ವಿನ್ಯಾಸಗಳನ್ನು ರಚಿಸಲು ಬಳಸುತ್ತಾರೆ.

# ಚಿನ್ನ ಅಥವಾ ಬೆಳ್ಳಿಯಂತಹ ಬೆಲೆಬಾಳುವ ಲೋಹಗಳನ್ನು ಶುದ್ಧೀಕರಿಸಲು ಬಳಸುತ್ತಾರೆ.

# ಅದಿರುಗಳಿಂದ ಲೋಹಗಳನ್ನು ಪಡೆಯಲು  ಬಳಸುತ್ತಾರೆ.

# ಕೆಲವು ಬಣ್ಣಗಳು, ಸುಗಂಧದ್ರವ್ಯಗಳು, ಪ್ಲಾಸ್ಟಿಕ್‌ಗಳು, ರೇಯಾನ್ (ಕೃತಕ ರೇಷ್ಮೆ)ಗಳು, ಗೊಬ್ಬರಗಳು (ಅಮೋನಿಯಮ್ ನೈಟ್ರೇಟ್), ಸ್ಫೋಟಕಗಳು (ಟ್ರೈನೈಟ್ರೋ ಟಾಲಿನ್ ಮತ್ತು ನೈಟ್ರೋ ಗ್ಲಿಸೆರಿನ್ ನಂತಹ) ಮತ್ತು ಔಷದಿಗಳ ತಯಾರಿಕೆಯಲ್ಲಿ ಬಳಸುತ್ತಾರೆ.

*💧2) ಹೈಡ್ರೋಕ್ಲೋರಿಕ್ ಆಮ್ಲ (HCI)*

# ಸಾಮಾನ್ಯ ಲವಣವನ್ನು ಶುದ್ಧೀಕರಿಸಲು ಬಳಸುತ್ತಾರೆ.

# ಅಂಟು (glue) ತಯಾರಿಸಲು ಬಳಸುತ್ತಾರೆ.

# ಗ್ಲೂಕೋಸ್ ಮತ್ತು ಕ್ಲೋರೈಡ್‌ಗಳ ತಯಾರಿಕೆಯಲ್ಲಿ ಬಳಸುತ್ತಾರೆ.

# ಬಟ್ಟೆ ಕಾರ್ಖಾನೆಗಳಲ್ಲಿ ಚೆಲುವೆಕಾರಿ (bleaching)ಯಾಗಿ ಬಳಸುತ್ತಾರೆ.

# ಲೋಹಗಳ ಲೇಪನ, ಬೆಸುಗೆ ಅಥವಾ ಗ್ಯಾಲ್ವನೀಕರಿಸುವ ಮುಂಚೆ ಅವುಗಳನ್ನು ಶುದ್ಧೀಕರಿಸಲು ಬಳಸುತ್ತಾರೆ.

*💧3) ಸಲ್ಫೂರಿಕ್ ಆಮ್ಲ (H2SO4)*

# ಪೆಟ್ರೋಲನ್ನು ಶುದ್ಧೀಕರಿಸಲು ಬಳಸುತ್ತಾರೆ.

# ಗೊಬ್ಬರಗಳು (ಅಮೋನಿಯಮ್ ಸಲ್ಫೆಟ್, ಸೂಪರ್ ಫಾಸ್ಪೇಟ್) ಮಾರ್ಜಕಗಳು, ಮದ್ದುಗಳು, ಪ್ಲಾಸ್ಟಿಕ್‌ಗಳು, ಪೇಂಟ್ ಮತ್ತು ರಾಸಾಯನಿಕಗಳು (ತಾಮ್ರದ ಸಲ್ಫೆಟ್, ಎಪ್ಸಮ್‌ ಲವಣ) ತಯಾರಿಕೆಗಳಲ್ಲಿ ಬಳಸುತ್ತಾರೆ.

# ಕಾಗದ, ಚರ್ಮ, ಬಟ್ಟೆ ಮತ್ತು ಆಟೋಮೊಬೈಲ್‌ಗಳ ಕಾರ್ಖಾನೆಗಳಲ್ಲಿ ಬಳಸುತ್ತಾರೆ.

# ಪ್ರಯೋಗಾಲಯದಲ್ಲಿ ಕಾರ್ಬನ್ ಡೈಆಕ್ಸೈಡನ್ನು ತಯಾರಿಸಲು ಸೋಡಿಯಮ್ ಕಾರ್ಬೋನೇಟ್ ನೊಂದಿಗೆ ಸಲ್ಫೂರಿಕ್ ಆಮ್ಲದ ವರ್ತನೆಯ ಕ್ರಿಯೆಯನ್ನು ಬಳಸುವರು.

# ಸಲ್ಫೂರಿಕ್ ಆಮ್ಲವು ಅನೇಕ ಉಪಯೋಗಗಳನ್ನು ಹೊಂದಿರುವುದರಿಂದ ಇದನ್ನು ಅಮ್ಲಗಳ ರಾಜ ಎನ್ನುವರು.

# ಮೆಗ್ನೀಸಿಯಮ್ ಸಲ್ಫೇಟನ್ನು (MgSo4, 7H2O) ಎಪ್ಸಮ್ ಲವಣ ಎನ್ನುವರು. ಇದು ನೀರಿನಲ್ಲಿ ನೈಸರ್ಗಿಕವಾಗಿ ಕಾಣಸಿಗುವ ಖನಿಜ. ಇದನ್ನು ಇಂಗ್ಲೆಂಡ್‌ನ ಎಪ್ಸಮ್ ಎನ್ನುವ ನಗರದಲ್ಲಿ ಪ್ರಥಮವಾಗಿ ಭಟ್ಟಿ ಇಳಿಸಿದ್ದರಿಂದ ಇದಕ್ಕೆ ಆ ಹೆಸರು ಬಂದಿದೆ.

# ಚಿನ್ನ ಮತ್ತು ಪ್ಲಾಟಿನಮ್‌ನಂತಹ ಲೋಹಗಳ ವಿನ್ಯಾಸಗಳನ್ನು ಕೆತ್ತನೆ ಮಾಡಲು 'ಆಕ್ವಾರೇಜಿಯಾವನ್ನು'  ಬಳಸುತ್ತಾರೆ.

_*🌐ಪ್ರಮುಖ ವಸ್ತುಗಳು ಮತ್ತು ಅವುಗಳು ಹೊಂದಿರುವ ಆಮ್ಲಗಳು*_

1. ಮೊಸರು (ಹಾಲು ಮತ್ತು ಹಾಲಿನ ಉತ್ಪನ್ನಗಳು) ಲ್ಯಾಕ್ಟಿಕ್ ಆಮ್ಲ

2. ಜಠರದಲ್ಲಿ ಉತ್ಪತ್ತಿಯಾಗುವ ಆಮ್ಲ

ಹೈಡ್ರೋಕ್ಲೋರಿಕ್ ಆಮ್ಲ

3. ವಿನೆಗರ್, ಸಣ್ಣ ಕರಳು

ದುರ್ಬಲ ಅಸಿಟಕ್

ಆಮ್ಲ

4. ತಂಪು ಪಾನೀಯ

    ಕಾರ್ಬೋನಿಕ್ ಆಮ್ಲ

"#ಭುಗೋಳಶಾಸ್ತ್ರ_ಮಾಹಿತಿ_ಕಣಜ"":

#ಭೂಗೋಳಶಾಸ್ತ್ರ.
ಸಂಗ್ರಹ :- 10 ನೇ ತರಗತಿ ಸಮಾಜ ವಿಜ್ಞಾನ.
1) ಒಂದು ರಾಷ್ಟ್ರದ ಒಳಗೆ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹೋಗಿ ನೆಲೆಸುವದನ್ನು ------ ವಲಸೆ ಎಂದು ಕರೆಯುವರು?
* ಆಂತರಿಕ ವಲಸೆ.
2) 2011 ರ ಪ್ರಕಾರ ಗರಿಷ್ಟ ಸಾಕ್ಷರತೆಯ ರಾಜ್ಯ ಯಾವುದು?
* ಕೇರಳ (93.91).
3) ವಲಸೆಗಾರ ಎಂದರೆ -----.
* ತನ್ನ ಹುಟ್ಟಿದ ಪ್ರದೇಶವನ್ನು ಬಿಟ್ಟು ಬೇರೊಂದು ಸ್ಥಳದಲ್ಲಿ ಹೋಗಿ ನೆಲೆ ನಿಲ್ಲುವುದು ಎಂದರ್ಥ.
4) EAG ವಿವರಿಸಿರಿ?
* Empowered Action Group.
5) ಜನಸಂಖ್ಯೆಯ ಹಂಚಿಕೆಯನ್ನು ವಿವರಿಸಲು ------ ಎಂಬ ಪದವನ್ನು ಸಾಮಾನ್ಯವಾಗಿ ಬಳಸಲಾಗುವುದು?
* ಸಾಂದ್ರತೆ.
6) ಜಿ ಪಿ ಎಸ್ ವಿವರಿಸಿರಿ?
* ಗ್ಲೋಬಲ್ ಪೊಜಿಶನಿಂಗ್ ಸಿಸ್ಟಮ್.
7) ಬೆಂಗಳೂರಿನ್ನು ಏಕೆ ಸಿಲಿಕಾನ್ ಸಿಟಿ ಎನ್ನುವರು?
* ಮಾಹಿತಿ ತಂತ್ರಜ್ಞಾನದ ಮುಖ್ಯ ಕೇಂದ್ರವಾಗಿರುವದರಿಂದ.
8) ಐರನ್ ಮತ್ತು ಸ್ಟೀಲ್ ಕಂಪನಿ ಬೋಕಾರೋ ಯಾವ ರಾಜ್ಯದಲ್ಲಿದೆ?
* ಝಾರ್ಖಂಡ್.
9) ಭಾರತದಲ್ಲಿ ಎಷ್ಟು ಪ್ರಧಾನ ಕೈಗಾರಿಕಾ ವಲಯಗಳಿವೆ?
* 8.
10) ಗೋವಾ ರಾಜ್ಯದ ಝಾವಾರಿ ಕೊಲ್ಲಿಯ ಪ್ರದೇಶದಲ್ಲಿರುವ ಬಂದರು ಯಾವುದು?
* ಮರ್ಮಗೋವಾ.
11) ಸೂರ್ಯನ ಕಿರಣಗಳಿಂದ ಹೊರ ಸೂಸಲ್ಪಡುವ ಶಾಖದ ಬಳಕೆಯನ್ನು ----- ಎಂದು ಕರೆಯುವರು?
* ಸೌರಶಕ್ತಿ.
12) "ದ್ರವರೂಪದ ಚಿನ್ನ" ಎಂದು ಯಾವುದಕ್ಕೆ ಕರೆಯುತ್ತಾರೆ?
* ಪೆಟ್ರೋಲಿಯಂ.
13) ಭಾರತದಲ್ಲಿ ಮೊದಲ 'ಪೆಟ್ರೋಲಿಯಮ್'ನ್ನು ಎಲ್ಲಿ ಪತ್ತೆ ಮಾಡಲಾಯಿತು?
* ಅಸ್ಸಾಂನ ದಿಗ್ಬಾಯ್.
14) "ಗೋಧಿಯ ಕಣಜ" ಎಂದು ಯಾವ ರಾಜ್ಯವನ್ನು ಕರೆಯುತ್ತಾರೆ?
* ಪಂಜಾಬ್.
15) ಭತ್ತವು ಪ್ರಮುಖವಾಗಿ ----- ಬೆಳೆಯಾಗಿದೆ?
* ಖಾರಿಪ್.
16) ಯಾವ ರಾಜ್ಯವು ಅತಿ ಹೆಚ್ಚು ಭತ್ತವನ್ನು ಬೆಳೆಯುವ ರಾಜ್ಯವಾಗಿದೆ?
* ಪಶ್ಚಿಮಬಂಗಾಳ.
17) ಮುಂಗಾರು ಬೆಳೆಯ ಮತ್ತೊಂದು ಹೆಸರೇನು?
* ಖರೀಫ್ ಬೇಸಾಯ.
18) ಒಂದು ವರ್ಷದಲ್ಲಿ ಒಂದೇ ವ್ಯವಸಾಯ ಕ್ಷೇತ್ರದಿಂದ 2-3 ಬೆಳೆಗಳನ್ನು ಬೆಳೆಯುವದಕ್ಕೆ ----- ಬೇಸಾಯ ಎಂದು ಕರೆಯುವರು?
* ಸಾಂದ್ರ ಬೇಸಾಯ.
19) "ಪೆರಿಯಾರ್ ಜಲ ವಿದ್ಯುಚ್ಛಕ್ತಿ ಯೋಜನೆ'' ಯಾವ ರಾಜ್ಯದಲ್ಲಿದೆ?
* ತಮಿಳುನಾಡು.
20) ಕರ್ನಾಟಕ ಮತ್ತು ಆಂಧ್ರ ಪ್ರದೇಶ ರಾಜ್ಯಗಳ ಸಂಯುಕ್ತ ಯೋಜನೆ ಯಾವುದು?
* ತುಂಗಭದ್ರಾ.
21) "ಒರಿಸ್ಸಾದ ಕಣ್ಣೀರಿನ ನದಿ" ಯಾವುದು?
* ಮಹಾನದಿ.
22) ಏಷ್ಯಾದಲ್ಲಿಯೇ ಅತ್ಯಂತ ಎತ್ತರವಾದ ಅಣೆಕಟ್ಟು ಯಾವುದು?
* ಭಾಕ್ರಾ ನಂಗಲ್ (226 ಮೀ).
23) ಸುಲ್ತಾನಪೂರ, ಗುರೆಗಾಂವ ವನ್ಯಜೀವಿ ಧಾಮಗಳು ಯಾವ ರಾಜ್ಯದಲ್ಲಿವೆ?
* ಹರಿಯಾಣ.
24) ಭಾರತದಲ್ಲಿರುವ ಒಟ್ಟು ಪ್ರಾಣಿ ಸಂಗ್ರಹಾಲಯಗಳ ಸಂಖ್ಯೆ ಎಷ್ಟು?
* 275.
25) ಪೆಡೋಲಜಿ ಎಂದರೇ -------.
* ಮಣ್ಣಿನಶಾಸ್ತ್ರ.
26) 'ಜಂಬಿಟ್ಟಿಗೆ ಮಣ್ಣಿನ' ಮತ್ತೊಂದು ಹೆಸರೇನು?
* ಲ್ಯಾಟ್ ರೈಟ್ ಮಣ್ಣು.
27) ಕಪ್ಪುಮಣ್ಣನ್ನು ----- ಎಂತಲೂ ಕರೆಯುತ್ತಾರೆ?
* ರೇಗೂರ್ ಮಣ್ಣು.
28) ಭಾರತದಲ್ಲಿ 'ನೈಋತ್ಯ ಮನ್ಸೂನ್' ಎಂದರೆ ------.
* ಮಳೆಗಾಲ ಎಂದರ್ಥ.
29) ಚಳಿಗಾಲದ ಅವಧಿ ತಿಳಿಸಿರಿ?
* ಡಿಸೆಂಬರ್ ನಿಂದ - ಫೆಬ್ರವರಿ.
30) ಬೇಸಿಗೆ ಕಾಲದ ಅವಧಿ ತಿಳಿಸಿರಿ?
* ಮಾರ್ಚ್ ನಿಂದ - ಮೇ.
31) ಭಾರತದ ದಕ್ಷಿಣದ ತುದಿಯು ------ ದ್ವೀಪದ ದಕ್ಷಿಣ ತುದಿಯಲ್ಲಿದೆ?
* ನಿಕೋಬಾರ್ ದ್ವೀಪದ.
32) ಭಾರತದ ಕರಾವಳಿಯನ್ನು ----- & ------- ಎಂದು ಎರಡು ಭಾಗಗಳಾಗಿ ವಿಗಂಡಿಸಲಾಗಿದೆ?
* ಪಶ್ಚಿಮ ಕರಾವಳಿ & ಪೂರ್ವ ಕರಾವಳಿ.
33) 43 ದ್ವೀಪಗಳು ------ ದಲ್ಲಿವೆ?
* ಅರಬ್ಬಿ ಸಮುದ್ರದಲ್ಲಿವೆ.
34) ಇತ್ತೀಚಿನ ಅವಧಿಯಲ್ಲಿ ಸಂಚಯಿತಗೊಂಡು ನಿರ್ಮಿತವಾಗಿರುವ ಮೆಕ್ಕಲುಮಣ್ಣಿನ್ನು ---- ಎಂದು ಕರೆಯುವರು?
* ಖದರ್.
35) ಉತ್ತರ ಭಾರತದ ಮಹಾ ಮೈದಾನವನ್ನು -------- ಮೈದಾನವೆಂತಲೂ ಕರೆಯುವರು?
* ಸಟ್ಲೇಜ್ ಗಂಗಾ ಮೈದಾನ.
36) ಮಹಾಹಿಮಾಲಯದ ಮತ್ತೊಂದು ಹೆಸರೇನು?
* ಹಿಮಾದ್ರಿ.
37) 'ಮಯನ್ಮಾರನ' ಮತ್ತೊಂದು ಹೆಸರೇನು?
* ಬರ್ಮಾ.
38) ಎನ್ ಸಿ ಟಿ ವಿವರಿಸಿರಿ?
* National Capital Territory.
39) 'ಇಂದಿರಾ ಪಾಯಿಂಟ್' ನ ಮತ್ತೊಂದು ಹೆಸರೇನು?
* ಪಿಗ್ಮೇಲಿಯನ್ ಪಾಯಿಂಟ್.
40) ಭಾರತವು ಸಂಪೂರ್ಣವಾಗಿ ಯಾವ ಗೋಳದಲ್ಲಿದೆ?
* ಉತ್ತರಾರ್ಧ ಗೋಳದಲ್ಲಿದೆ.
41) ಭಾರತವು ಏಷ್ಯಾ ಖಂಡದ ಯಾವ ಭಾಗದಲ್ಲಿರುವ ಪರ್ಯಾಯ ದ್ವೀಪವಾಗಿದೆ?
* ದಕ್ಷಿಣ.

No comments:

Post a Comment