#ಪ್ರಚಲಿತ
“ಹೈ ರಿಸ್ಕ್ ಪ್ರೆಗ್ನೆನ್ಸಿ ಪೋರ್ಟಲ್” ಆರಂಭಿಸಿದ ದೇಶದ ಮೊದಲ ರಾಜ್ಯ ಹರಿಯಾಣ
ಹರಿಯಾಣ ಸರ್ಕಾರ “ಹೈ ರಿಸ್ಕ್ ಪ್ರೆಗ್ನೆನ್ಸಿ (ಎಚ್ಆರ್ಪಿ) ಪೋರ್ಟಲ್ (High Risk Pregnancy Portal)” ಅನ್ನು ಪ್ರಾರಂಭಿಸಿದ್ದು, ಇಂತಹ ಪೋರ್ಟಲ್ ಜಾರಿಗೆ ತಂದ ದೇಶದ ಮೊದಲ ರಾಜ್ಯವೆನಿಸಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ನೀತಿ ಅಯೋಗ ಇದೊಂದು ಉತ್ತಮ ಕ್ರಮವೆಂದು ಬಣ್ಣಿಸಿದೆ.
ಪೋರ್ಟಲ್ ಬಗ್ಗೆ:
ಈ ವಿನೂತನ ವೆಬ್ ಅಪ್ಲಿಕೇಶನ್ ಹೆರಿಗೆಯಾದ 42 ದಿನಗಳ ವರೆಗೆ ಹೆಚ್ಚು ತೊಂದರೆಯಲ್ಲಿರುವ ಗರ್ಭಿಣಿ ಮಹಿಳೆಯರನ್ನು ಪತ್ತೆಹಚ್ಚಲು ವಿನ್ಯಾಸಗೊಳಿಸಲಾಗಿದೆ, ಇದರಿಂದ ಗರ್ಭೀಣಿಯರು ಉತ್ತಮ ಆರೋಗ್ಯ ಹಾರೈಕೆಯನ್ನು ಪಡೆಯಲು ಅನುಕೂಲವಾಗಲಿದೆ. ಈ ಪೋರ್ಟಲ್ ನಿಂದ ಹೆಚ್ಚು-ಅಪಾಯಕಾರಿ ಗರ್ಭಿಣಿ ಪ್ರಕರಣಗಳನ್ನು ತಳಮಟ್ಟದಲ್ಲಿ ಮುಂಚಿತವಾಗಿ ಗುರುತಿಸುವುದಲ್ಲದೇ, ಆಸ್ಪತ್ರೆಗಳಿಗೆ ಸಕಾಲದಲ್ಲಿ ದಾಖಲಿಸಲು ಸುಲಭವಾಗಲಿದೆ.
ಹಿನ್ನಲೆ:
ಅಪಾಯಕಾರಿ ಗರ್ಭಧಾರಣೆಯ ಪ್ರಕರಣಗಳನ್ನು ಗುರುತಿಸಲು “ಹೈ ರಿಸ್ಕ್ ಪ್ರೆಗ್ನೆನ್ಸಿ” ನಿಯಮವನ್ನು ನವೆಂಬರ್, 2017 ರಿಂದ ರಾಜ್ಯದಾದ್ಯಂತ ಅನುಷ್ಠಾನಗೊಳಿಸಲಾಗುತ್ತಿದೆ. ಈ ಉಪಕ್ರಮವು ತಾಯಿಯಂದಿರ ಮರಣ ಪ್ರಮಾಣ (MMR), ಶಿಶು ಮರಣ ಪ್ರಮಾಣ (IMR) ಮತ್ತು ಗರ್ಭಪಾತದಂತಹ ಪ್ರಕರಣಗಳನ್ನು ತಡೆಯಲು ರೂಪಿಸಲಾಗಿದೆ
No comments:
Post a Comment