ವಿಷಯ :- ರಾಜಶಾಸ್ತ್ರ .
ಸಂಗ್ರಹ :- 10 ನೇ ತರಗತಿ ಸಮಾಜ ವಿಜ್ಞಾನ.
1) ಧರ್ಮದ ಆಧಾರದಲ್ಲಿ ಸಮಗ್ರ ಸಮಾಜದ ವಿಭಜನೆ ಹಾಗೂ ಆ ನೆಲೆಯಲ್ಲೇ ಗುರುತಿಸಿಕೊಂಡು ಪರಸ್ಪರ ವಿರುದ್ಧ ಹಿತಾಸಕ್ತಿಗಳನ್ನು ಬೆಳಸಿಕೊಳ್ಳುವದನ್ನು ----- ಎನ್ನುವರು?
* ಕೋಮುವಾದ.
2) ಕೋಮುವಾದದ ಮತ್ತೊಂದು ಹೆಸರೇನು?
* ಮತೀಯವಾದ.
3) ಒಂದು ನಿರ್ದಿಷ್ಟ ಜನಸಮುದಾಯ ತಾವು ವಾಸಿಸುವ ಪ್ರದೇಶವನ್ನು ಅತ್ಯಂತ ಗಾಡವಾಗಿ ಪ್ರೀತಿಸುವುದೇ ------.
* ಪ್ರಾದೇಶಿಕವಾದ.
4) ಇತ್ತೀಚೆಗೆ ಆಂದ್ರಪ್ರದೇಶದಲ್ಲಿನ ತೆಲಂಗಾಣ ಭಾಗದ ಹೋರಾಟ ಯಾವುದಕ್ಕೆ ಉದಾಹರಣೆ?
* ಪ್ರಾದೇಶಿಕವಾದಕ್ಕೆ.
5) 6 ರಿಂದ 14 ವರ್ಷದ ವಯೋಮಾನದವರಿಗೆ ಶಿಕ್ಷಣವನ್ನು ಕಡ್ಡಾಯಗೊಳಿಸಿರುವ ಕಾಯ್ದೆ ಯಾವುದು?
* 2009 ರ ಶಿಕ್ಷಣ ಹಕ್ಕು ಕಾಯ್ದೆ.
6) ------- ಸರ್ಕಾರವು ಸ್ತ್ರೀಶಕ್ತಿ ಎಂಬ ಕಾರ್ಯಕ್ರಮವನ್ನು ರೂಪಿಸಿತು?
* ಕರ್ನಾಟಕ.
7) ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿನ ಚುನಾವಣೆಗಳಲ್ಲಿ ಮಹಿಳಾ ಮಿಸಲಾತಿ ತಿಳಿಸಿರಿ?
* ಶೇ.33 '/.
8) ಯಾವುದೇ ಆಮದು ಸುಂಕವನ್ನು ಸರ್ಕಾರಕ್ಕೆ ನೀಡದೆ ಗುಪ್ತವಾಗಿ ವಿದೇಶಗಳಿಂದ ವಸ್ತುಗಳನ್ನು ತರಿಸಿಕೊಳ್ಳುವದನ್ನು ------ ಎಂದು ಕರೆಯುತ್ತಾರೆ?
* ಕಳ್ಳಸಾಗಾಣಿಕೆ.
9) ಸಂವಿಧಾನದ 51 ನೇ ವಿಧಿ ಏನು ತಿಳಿಸುತ್ತದೆ?
* ಅಂತರರಾಷ್ಟ್ರೀಯ ಸಂಬಂಧದ ಬಗ್ಗೆ.
10) ಪ್ರಚಲಿತ ಪ್ರಪಂಚವನ್ನು ------ ಎಂದು ಕರೆಯುತ್ತೇವೆ?
* ವಿಶ್ವ ಕುಟುಂಬ.
11) ಯಾವ ಧರ್ಮ ಭಾರತೀಯ ಭಿಕ್ಷುಗಳಿಂದ ಶ್ರೀಲಂಕಾದಲ್ಲಿ ಪಸರಿಸಲ್ಪಟ್ಟಿತು?
* ಬೌದ್ಧ ಧರ್ಮ.
12) ನಿಶ್ಯಸ್ತ್ರೀಕರಣ ಎಂದರೆ ------.
* ನಿರ್ದಿಷ್ಟ ಅಥವಾ ಎಲ್ಲಾ ಶಸ್ತ್ರಾಸ್ತ್ರಗಳನ್ನು ಕಡಿತಗೊಳಿಸುವ ಅಥವಾ ಸಂಪೂರ್ಣ ಇಲ್ಲವಾಗಿಸುವ ನೇರ ಪ್ರಕ್ರಿಯೆ.
13) 1963 ರ ಬಳಿಕ ಅಮೇರಿಕಾ ಸಂಯುಕ್ತ ಸಂಸ್ಥಾನ ಹಾಗೂ -------- ಹಲವಾರು ದ್ವಿಪಕ್ಷಿಯಾ ಒಪ್ಪಂದಗಳನ್ನು ಮಾಡಿಕೊಂಡವು?
* ಸೋವಿಯತ್ ರಷ್ಯಾ.
14) ತೃತೀಯ ಜಗತ್ತು ಎಂಬ ವಿಚಾರವೇ -------- ಎಂಬ ಅಂಶವನ್ನು ಎತ್ತಿ ತೋರಿಸುತ್ತದೆ?
* ಬಡರಾಷ್ತ್ರಗಳು.
15) ಯಾವುದನ್ನು ಭೀತಿವಾದ ಅಥವಾ ಉಗ್ರಗಾಮಿತ್ವ ಎಂದೂ ಕರೆಯಬಹುದು?
* ಭಯೋತ್ಪಾದಕತೆಯನ್ನು.
16) ವಿನ್ ಸ್ಟನ್ ಚರ್ಚಿಲ್ ಯಾವ ದೇಶದವನು?
* ಇಂಗ್ಲೆಂಡ್.
17) ಜೋಸೆಫ್ ಸ್ಟಾಲಿನ್ ಯಾವ ದೇಶದವನು?
* ರಷ್ಯಾ.
18) ಪ್ರಾಂಕ್ಲಿನ್ ಡಿ ರೋಸ್ ವೆಲ್ಟ್ ಯಾವ ದೇಶದವನು?
* ಅಮೇರಿಕಾ.
19) ವಿಶ್ವ ಸಂಸ್ಥೆಯ ಪ್ರಸ್ತುತ ಸದಸ್ಯ ರಾಷ್ಟ್ರಗಳ ಸಂಖ್ಯೆ ಎಷ್ಟು?
* 193.
20) ಎಲ್ಲಾ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳನ್ನು ಒಳಗೊಂಡ ಅಂಗಸಂಸ್ಥೆ ಯಾವುದು?
* ಸಾಮಾನ್ಯ ಸಭೆ.
21) ಭದ್ರತಾ ಸಮಿತಿಯಲ್ಲಿ ಎಷ್ಟು ಮಂದಿ ಸದಸ್ಯರಿರುತ್ತಾರೆ?
* 15.
22) ಅಂತರರಾಷ್ಟ್ರೀಯ ನ್ಯಾಯಾಲಯ ಎಲ್ಲಿ ಸ್ಥಾಪಿತಗೊಂಡಿದೆ?
* ಹೇಗ್.
23) ಹೇಗ್ ಯಾವ ರಾಷ್ಟ್ರದಲ್ಲಿದೆ?
* ನೆದರ್ ಲ್ಯಾಂಡ್.
24) ವಿಶ್ವ ಸಂಸ್ಥೆಯ ಮೊಟ್ಟ ಮೊದಲ ಮಹಾ ಕಾರ್ಯದರ್ಶಿ ಯಾರು?
* ಟ್ರಿಗ್ವೆ ಲೀ.
25) ಟ್ರಿಗ್ವೆ ಲೀಯ ಅಧಿಕಾರವಧಿ ತಿಳಿಸಿ?
* 1946-1952.
26) ಟ್ರಿಗ್ವೆಲೀ ಯಾವ ದೇಶದವರು?
* ನಾರ್ವೆ.
27) ಬಾನ್ ಕಿ ಮೂನ್ ವಿಶ್ವ ಸಂಸ್ಥೆಯ ಅಧಿಕಾರ ವಹಿಸಿಕೊಂಡದ್ದು ಯಾವಾಗ?
* 2007 ರಿಂದ ಪ್ರಸ್ತುತದವರೆಗೆ.
28) GATT ವಿವರಿಸಿರಿ?
* General Agriment on Terifs and Trade.
29) ಎಫ್ ಎ ಓ ಉದಯವಾದದ್ದು ಯಾವಾಗ?
* 1945 ರಲ್ಲಿ.
30) ಸಾರ್ವತ್ರಿಕ ಮಾನವ ಹಕ್ಕುಗಳ ಘೋಷಣೆಯಾದದ್ದು ಯಾವಾಗ?
* 1948, ಡಿಸೆಂಬರ್ 10.
31) ಪ್ರಪಂಚದ ಮಾನವರ ಆರೋಗ್ಯ ಸುಧಾರಿಸಲು ಯಾವ ಸಂಸ್ಥೆ ಸ್ಥಾಪನೆಗೊಂಡಿತು?
* ವಿಶ್ವ ಆರೋಗ್ಯ ಸಂಸ್ಥೆ.
32) ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ಕಚೇರಿ ಎಲ್ಲಿದೆ?
* ಜೀನವಾ.
33) ಜೀನೆವಾ ಯಾವ ರಾಷ್ಟ್ರದಲ್ಲಿದೆ?
* ಸ್ವಿಟ್ಜರ್ಲ್ಯಾಂಡ್.
34) ಯುನೆಸ್ಕೋ ಯಾವಾಗ ಸ್ಥಾಪನೆಯಾಯಿತು?
* 1946 ರಲ್ಲಿ.
35) ಯುನಿಸೆಫ್ ಯಾವಾಗ ನೋಬೆಲ್ ಬಹುಮಾನ ಪಡೆದದ್ದು?
* 1965 ರಲ್ಲಿ.
36) ವಿಶ್ವ ಬ್ಯಾಂಕ್ ಎಂದೂ ಕರೆಯಲ್ಪಡುವ ಸಂಸ್ಥೆ ಯಾವುದು?
* ಐ ಬಿ ಆರ್ ಡಿ.
37) ಐ ಬಿ ಆರ್ ಡಿ ವಿವರಿಸಿರಿ?
* International Bank of Reconstruction and Development.
38) ಐ ಎಲ್ ಓ ಪ್ರಧಾನ ಕಚೇರಿ ಎಲ್ಲಿದೆ?
* ಜಿನೇವಾ.
39) ಐ ಎಂ ಎಫ್ ಹಾಗೂ ಐ ಬಿ ಆರ್ ಡಿ ಸಂಸ್ಥೆಗಳೊಂದಿಗೆ ------ ತೃತೀಯ ಆರ್ಥಿಕ ಆಧಾರ ಸ್ತಂಭ ಎಂದು ಕರೆಯಲ್ಪಡುತ್ತದೆ?
* ವಿಶ್ವ ವ್ಯಾಪಾರ ಸಂಘ.
40) ಕಾಮನ್ ವೆಲ್ತ್ ರಾಷ್ಟ್ರ ಸಂಘ ಯಾವಾಗ ಉದಯವಾಯಿತು?
* 1926 ರಲ್ಲಿ.
41) ಪ್ರಸಕ್ತ ಕಾಮನ್ ವೆಲ್ತ್ ಸಂಸ್ಥೆಯಲ್ಲಿ ಎಷ್ಟು ಸದಸ್ಯ ರಾಷ್ಟ್ರಗಳಿವೆ?
* 54.
42) ಕಾಮನ್ ವೆಲ್ತ್ ರಾಷ್ಟ್ರ ಸಂಘದ ಕೇಂದ್ರ ಕಚೇರಿ ಎಲ್ಲಿದೆ?
* ಲಂಡನ್ ನಲ್ಲಿದೆ.
43) ಯುರೋಪಿಯನ್ ಯೂನಿಯನ್ ಯಾವಾಗ ಉದಯವಾಯಿತು?
* 1992 ರಲ್ಲಿ.
44) ಆಸಿಯನ್ ಸಂಸ್ಥೆ ಯಾವಾಗ ಉದಯವಾಯಿತು?
* 1967 ರಲ್ಲಿ.
No comments:
Post a Comment